More

    ರಾಜ್ಯಮಟ್ಟದ ಪ್ರಬಂಧ, ಚರ್ಚಾಸ್ಪರ್ಧೆ ವಿಜೇತರು

    ಹುಬ್ಬಳ್ಳಿ: ನಗರದ ಎಸ್ ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು.

    ಮಾದರಿ ಗ್ರಾಮ ಪ್ರಬಂಧ ಸ್ಪರ್ಧೆ ಹಾಗೂ ಐದು ಗ್ಯಾರಂಟಿಗಳು- ಕರ್ನಾಟಕ ಆರ್ಥಿಕತೆಗೆ ಸಾಧಕವೋ, ಮಾರಕವೋ? ವಿಷಯದ ಮೇಲೆ ಚರ್ಚಾ ಸ್ಪರ್ಧೆ ನಡೆಯಿತು.

    ರಾಜ್ಯದ ವಿವಿಧ ಪದವಿ ಕಾಲೇಜುಗಳಿಂದ 155 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಇಂತಹ ಸ್ಪರ್ಧೆಗಳು ಕಡಿಮೆಯಾಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು ಎಂದರು.

    ಅತಿಥಿಗಳಾಗಿದ್ದ ಧಾರವಾಡ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ. ಚಂದ್ರ ಪೂಜಾರಿ ಅವರು, ಪ್ರಸ್ತುತ ದಿನಗಳಲ್ಲಿ ಚರ್ಚೆ, ಸಂವಾದಗಳು ಹೆಚ್ಚು ನಡೆಯಬೇಕು. ಭವಿಷ್ಯದ ಬದಲಾವಣೆಗಾಗಿ ಇವು ಪೂರಕ ಅರಿವು ನೀಡುವಂತಾಗಬೇಕು ಎಂದರು.

    ಸಮಾರೋಪದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ವಿ. ದಾಡಿಬಾವಿ ಅವರು ವೀಜೇತರಿಗೆ ಬಹುಮಾನ ವಿತರಿಸಿದರು.

    ಅಧ್ಯಕ್ಷತೆಯನ್ನು ಹುಬ್ಬಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ ವಹಿಸಿದ್ದರು.

    ಎಸ್ ಜೆಎಂವಿ ಸಂಘದ ಗೌರವ ಸದಸ್ಯ ಮಲ್ಲಿಕಾರ್ಜುನ ಕಳಸರಾಯ, ಪ್ರಾಚಾರ್ಯ ಡಾ. ಸಿಸಿಲಿಯಾ ಡಿ’ಕ್ರೂಜ್, ಡಾ. ತಾಯಣ್ಣ, ಪ್ರೊ. ಶಶಾಂಕ, ಪ್ರೊ. ಅಶ್ವಿನಿ ಇಂದರಗಿ, ಭಾಗವಹಿಸಿದ್ದರು.

    ಮಾಧುರಿ, ಪ್ರೇಮಚಂದ್ರನ್, ಲೀಲಾವತಿ ಕವಡಿಶೆಟ್ಟರ್ ಮತ್ತು ಸರಸ್ವತಿ ಬೊಮ್ಮನಾಳ ತೀರ್ಪುಗಾರರಾಗಿದ್ದರು. ಕಾಲೇಜಿನ ಸಂಗೀತ ವಿಭಾಗದ ಡಾ. ಜ್ಯೋತಿಲಕ್ಷ್ಮಿಡಿ.ಪಿ. ಹಾಗೂ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಪ್ರೊ. ಶಿವಕುಮಾರ ಬನ್ನಿಹಟ್ಟಿ ಸ್ವಾಗತಿಸಿದರು. ಚಿನ್ನಿಧಿ ಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಿವಕುಮಾರ ಪ್ರಭಯ್ಯನವರಮಠ ವಂದಿಸಿದರು.

    ವಿಜೇತರು: ಚರ್ಚಾ ಸ್ಪರ್ಧೆಯಲ್ಲಿ ಗದಗ ಎ.ಎಸ್.ಎಸ್. ಕಾಲೇಜಿನ ವೈಭವ ಹಳ್ಳಿಕೇರಿ ಪ್ರಥಮ, ಧಾರವಾಡ ಕರ್ನಾಟಕ ಕಲಾ ಕಾಲೇಜಿನ ಯೋಗಿತಾ ದಿಡ್ಡಿಮಠ ದ್ವೀತಿಯ ಹಾಗೂ ಹುಬ್ಬಳ್ಳಿಯ ಆಕ್ಸಫರ್ಡ್ ಕಾಲೇಜಿನ ಸೌರಭ ಮುರಡಿ ತೃತೀಯ ಬಹುಮಾನ ಪಡೆದರು.

    ಪ್ರಬಂಧ ಸ್ಪರ್ಧೆಯಲ್ಲಿ ಧಾರವಾಡ ಸತ್ಯಸಾಯಿ ಸಂಸ್ಥೆಯ ಸಂಜನಾ ಮೂಲಿಮನಿ ಪ್ರಥಮ, ಬೆಳಗಾವಿ ಕೆಎಲ್ಇ ಲಿಂಗರಾಜ ಕಾಲೇಜಿನ ಸೃಷ್ಟಿ ಡಿ. ಹಾರೋಗೇರಿ ದ್ವೀತಿಯ ಹಾಗೂ ಹುಬ್ಬಳ್ಳಿ ಜೆ.ಜಿ. ಕಾಮರ್ಸ್ ಕಾಲೇಜಿನ ಪಲ್ಲವಿ ಮಳಿಮಠ ತೃತೀಯ ಬಹುಮಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts