More

    ಸಿಎಂ , ಡಿಸಿಎಂ ಬದಲಾವಣೆ ಚರ್ಚೆ ಅನಗತ್ಯ

    ಕಲಬುರಗಿ: ಮುಖ್ಯಮಂತ್ರಿ ಬದಲಾವಣೆ, ಮೂವರು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದಲ್ಲಿ ಏನೇ ನಿರ್ಧಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆ ವೈಯಕ್ತಿಕ ವಿಚಾರವಾಗಿದೆ. ನಾನು ಅದೇ ವೇದಿಕೆಯಲ್ಲಿ ಇದ್ದೆ. ಅದು ಮಾಧ್ಯಮದಲ್ಲಿ ಅಷ್ಟು ದೊಡ್ಡದಾಗಿ ಚರ್ಚೆ ಆಗ್ತಿದೆ ಎಂದು ಹೇಳಿದರು.

    ಸಿಟಿ ರವಿ ಯವರು ಏನು ಮಾತಾಡ್ತಾರೆ ಅವರಿಗೆ ಗೊತ್ತಾಗೋದಿಲ್ಲ. 136 ಜನ ಗೆಲ್ಲಿಸುವ ಮೂಲಕ ರಾಜ್ಯದ ಜನರು ನಮಗೆ ಮ್ಯಾಂಡೆಟ್ರಿ ಕೊಟ್ಟಿದ್ದಾರೆ. ಸಿಟಿ ರವಿ ಅವರು ಹೈ ಕಮಾಂಡ್ ಮೆಚ್ಚಿಸಲು ಮಾತನಾಡುತ್ತಿರಬೇಕು ಎಂದು ಹೇಳಿದರು.

    ಗ್ಯಾರೆಂಟಿ ಯೋಜನೆಗಳಿಂದ ಜನರು ಸೋಮಾರಿ ಆಗ್ತಿದ್ದಾರೆ ರಂಭಾಪುರಿ ಜಗದ್ಗುರು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ತಂಗಡಿ, ಕೆಲಸವು ಕೊಡಬೇಕು ಆದ್ರೆ ಗ್ಯಾರೆಂಟಿ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ. ಬಡವರ ಯೋಜನೆ ಬಗ್ಗೆ ಯಾರು ಕೂಡ ಅಪಸ್ವರ ಎತ್ತಬಾರದು ಎಂದು ವಿನಂತಿಸಿದರು.
    ಕರೋನಾ ಸಮಯದಲ್ಲಿ ಎನ್ ಡಿಎ ಸರ್ಕಾರವೂ ನೀಡಿದ್ದ ಅಕ್ಕಿಯಿಂದಲೇ ಜನ ಬದುಕಿದ್ದಾರೆ. ಬಡವರ ಯೋಜನೆ ಬಂದ್ ಆಗಲ್ಲ ಅಂತಾ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ.

    ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರವೇಯಿಂದ ಪ್ರತಿಭಟನೆ ಗಮನದಲ್ಲಿದೆ. ಈ ಕುರಿತು ಈಗಾಗಲೇ ಕರವೇ ಅವರ ಜೊತೆ ಮಾತನಾಡಿದ್ದೇನೆ.

    ಸರೋಜಿನಿ ಮಹರ್ಷಿ ವರದಿ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡೋದಕ್ಕೆ ಒಂದು ಸಮಿತಿ ರಚಿಸಲಾಗಿದೆ. ಶೀಘ್ರದಲ್ಲೇ ಅದನ್ನ ಆದಷ್ಟು ಬೇಗ ಪೂರ್ಣಗೊಳಿಸಿ ಅನುಷ್ಟಾನ ಮಾಡಲಾಗುತ್ತದೆ ಎಂದು ಹೇಳಿದರು.

    ನಮಗೆ ಕನ್ನಡಿಗರು ಬೇಕು, ಅದರ ಜೊತೆಗೆ ಬೇರೆಯವರು ಬೇಕು. ಎಲ್ಲರ ಕುರಿತು ವರದಿ ಸಿದ್ಧಪಡಿಸುತ್ತಿದ್ದು, ವರದಿ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ರಂಗಾಯಣಕ್ಕೆ ಶೀಘ್ರ ನಿರ್ದೇಶಕರು: ನಮ್ಮ ಸರ್ಕಾರ ಎಲ್ಲ ನಿಗಮಗಳಿಗೆ ನೇಮಕ ವೇಗವಾಗಿ ಮಾಡುತ್ತಿದ್ದೆ. ರಂಗ ಸಮಾಜ ರಚಿಸುತ್ತಿದ್ದು, ಅದಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ರಂಗ ಸಮಾಜ ರಚನೆ ಪೂರ್ಣಗೊಂಡ ಬಳಿಕ ರಂಗಾಯಣ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts