More

     ಸ್ಥಾನಮಾನ ಸಮಾಜಸೇವೆಯ ಅವಕಾಶ ದಾವಣಗೆರೆ ಸನ್ಮಾನ ಕಾರ್ಯಕ್ರಮ

    ದಾವಣಗೆರೆ: ಸಾರ್ವಜನಿಕ ಜೀವನದಲ್ಲಿ ದೊರೆತ ಸ್ಥಾನಮಾನವನ್ನು ಸಮಾಜಸೇವೆಯ ಅವಕಾಶ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕು. ಆಗ ದೇಶ ಅಭಿವೃದ್ಧಿಯಾಗಲಿದೆ ಎಂದು  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಹೇಳಿದರು.
    ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ವಕೀಲ ಎನ್. ಜಯದೇವನಾಯ್ಕ ಅವರಿಗೆ
    ಜಿಲ್ಲಾ ವಕೀಲರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯಾವುದೇ ವ್ಯಕ್ತಿ, ಅಧಿಕಾರ ದೊರೆತಾಗ ಹೆಚ್ಚು ವಿನಯವಂತನಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮೂಲಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆ ಹೊಂದಿದಾಗ ಮಾತ್ರ ಸ್ಥಾನಮಾನಗಳ ಜತೆ ವ್ಯಕ್ತಿಯ ವ್ಯಕ್ತಿತ್ವ ಬೆಳಗಲಿದೆ ಎಂದು ತಿಳಿಸಿದರು.
    ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥ, ಪ್ರಾಮಾಣಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಯುವಜನರಿಗೆ  ಆದರ್ಶಗಳನ್ನು ಹೇಳಿಕೊಡುವ ವ್ಯಕ್ತಿತ್ವದ ಅವಶ್ಯಕತೆ ಇದೆ ಎಂದರು.
    ಸನ್ಮಾನ ಸ್ವೀಕರಿಸಿದ ಎನ್.ಜಯದೇವನಾಯ್ಕ ಮಾತನಾಡಿ, ರಾಜಕಾರಣದಲ್ಲಿ ಪ್ರಾಮಾಣಿಕತೆ, ಬದ್ಧ್ದತೆ ಮತ್ತು ತತ್ವ ಸಿದ್ದಾಂತಗಳು ಕಣ್ಮರೆ ಆಗುತ್ತಿದ್ದು, ಜನತೆ ರಾಜಕೀಯದಿಂದ ವಿಮುಖರಾಗುತ್ತಿದ್ದಾರೆ. ತಮಗೆ ದೊರೆತಿರುವ ಸ್ಥಾನಮಾನವನ್ನು ಶೋಷಿತರ ಅಭಿವೃದ್ದಿ ಮತ್ತು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುವುದಾಗಿ ಹೇಳಿದರು,
    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಜಯದೇವನಾಯ್ಕ ಅವರು  ಸಂವಿಧಾನದ ಆಶೋತ್ತರಕ್ಕೆ  ಅನುಗುಣವಾಗಿ ಸಾಮಾಜಿಕ ನ್ಯಾಯ ದೊರಕಿಸುವತ್ತ ಕಾರ್ಯೋನ್ಮುಖರಾಗುವ ನಂಬಿಕೆ ಇದೆ ಎಂದರು.
    ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹಾವೀರ ಮ.ಕರೆಣ್ಣವರ್, ಹಿರಿಯ ವಕೀಲರಾದ ಎಚ್.ಎನ್.ರಾಜಶೇಖರಪ್ಪ, ರಾಮಚಂದ್ರ ಕಲಾಲ್, ಡಿ.ಪಿ.ಬಸವರಾಜ್, ಎನ್.ಎಂ.ಆಂಜನೇಯ, ಮಲ್ಲೇಶ್ ನಾಯ್ಕ, ಟಿ.ಎಚ್.ಸಿದ್ದಪ್ಪ ಲೋಕಿಕೆರೆ, ತಿಪ್ಪೇಶ್ ರಾಥೋಡ್ ಮಾತನಾಡಿದರು.
    ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ.ನೀಲಕಂಠಯ್ಯ, ಟಿ.ಎಚ್.ಮಧುಸೂಧನ್, ವಾಗೀಶ್ ಕಟಗಿಹಳ್ಳಿ ಮಠ, ಎಂ.ಚೌಡಪ್ಪ, ಎಲ್.ನಾಗರಾಜ್ ಇತರರು ಇದ್ದರು.
    ———

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts