More

    ‘ಸಂಭವಾಮಿ ಯುಗೇ ಯುಗೇ’ ಚಿತ್ರ ಶುಕ್ರವಾರ ತೆರೆಗೆ

    ದಾವಣಗೆರೆ: ಯುವಜನರಲ್ಲಿ ಹಳ್ಳಿ ಪ್ರೇಮ ಮೂಡಿಸುವ ಸಂದೇಶವುಳ್ಳ ‘ಸಂಭವಾಮಿ ಯುಗೇ ಯುಗೇ’ ಸಿನಿಮಾ ಜೂ. 21ರಂದು ರಾಜ್ಯದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಹೇಳಿದರು.
    ದಿನೇಶ್‌ಬಾಬು, ಡಾರ್ಲಿಂಗ್ ಕೃಷ್ಣ ಬಳಿ ಕೋರಿಯಾಗ್ರಾಫರ್ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಪ್ರತಿಭಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಒದಗಿಸಿದ್ದಾರೆ. ಪುರಾನ್ ಶೆಟ್ಟಗಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ವಿದ್ಯಾವಂತರು ಪಟ್ಟಣ ಸೇರುತ್ತಿದ್ದು, ಹಳ್ಳಿಗಳಲ್ಲಿ ಮೊದಲಿನ ವೈಭವವಿಲ್ಲ. ಯುವಕರು ಗ್ರಾಮಗಳಲ್ಲೇ ಇದ್ದು ಕೆಲಸ ಮಾಡಬಹುದು ಎಂಬ ಸಂದೇಶ ಚಿತ್ರದಲ್ಲಿದೆ. ಕಲಿಯುಗದಲ್ಲಿ ಅಧರ್ಮ ಹೆಚ್ಚಾದಾಗ ಕೃಷ್ಣ-ಅರ್ಜುನ ಪಾತ್ರಗಳು ಬಂದು ತಡೆಯುತ್ತಾರೆ. ಆಶ್ರಯ ನೀಡಿದ ಊರಿಗೆ ಏನನ್ನಾದರೂ ನೀಡಬೇಕೆಂದುಕೊಳ್ಳುವ ಚಿತ್ರದ ನಾಯಕನಟ, ಗ್ರಾಪಂ ಅಧ್ಯಕ್ಷನಾಗಿ ಏನು ಮಾಡುತ್ತಾನೆ ಎಂಬುದೇ ಚಿತ್ರದ ಕಥಾವಸ್ತುವಾಗಿದೆ ಎಂದು ವಿವರಿಸಿದರು.
    ಚನ್ನಪಟ್ಟಣ, ಮಂಡ್ಯ, ರಾಮನಗರ ಮತ್ತಿತರೆಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಜಯಶೆಟ್ಟಿ, ನಿಶಾ ರಜಪೂತ್ ನಾಯಕ ನಟ-ನಟಿಯರಾಗಿದ್ದು ಸುಧಾರಾಣಿ, ಭವ್ಯಾ, ಮಧುರಾಗೌಡ, ಬಲರಾಜವಾಡಿ, ಪ್ರಮೋದ್ ಶೆಟ್ಟಿ, ಅಶ್ವಿನಿಹಾಸನ್, ಅಶೋಕ್‌ಕುಮ್, ಅಭಯ್ ಪುನೀತ್ ದೊಡ್ಡ ತಾರಾಗಣವಿದೆ. ಕಥೆ ಕಮರ್ಷಿಯಲ್ ಆದರೂ ಕುಟುಂಬ ಸದಸ್ಯರು ಒಟ್ಟಿಗೆ ನೋಡಬಹುದಾದ ಚಿತ್ರ ಇದಾಗಿದೆ ಎಂದು ತಿಳಿಸಿದರು.
    ನಾಯಕನಟ ಜಯಶೆಟ್ಟಿ ಮಾತನಾಡಿ, ನನ್ನದು ಕುಂದಾಪುರ. 1973 ನನ್ನ ಮೊದಲ ಚಿತ್ರ. ಇದು ಎರಡನೇ ಸಿನಿಮಾ ಆಗಿದ್ದು ಉತ್ತಮ ನಿರೀಕ್ಷೆ ಇದೆ. ಕೆಲವೇ ಮಂದಿ ಹೊಸಬರ ಸಿನಿಮಾ ಆದರೂ ಇದರಲ್ಲಿ ಹಳೆಯ ಕಲಾವಿದರೂ ನಟಿಸಿದ್ದಾರೆ ಎಂದು ಹೇಳಿದರು.
    ನಟಿಯರಾದ ನಿಶಾ ರಜಪೂತ್, ಮಧುರಗೌಡ, ಖಳನಟ ವೆಂಕಟೇಶ್ ಪ್ರಸಾದ್ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts