More

    ಟಾಪ್ 6 ಸ್ಮಾರ್ಟ್‌ಸಿಟಿಗಳಲ್ಲಿ ರಾಜ್ಯದ 4 ನಗರಗಳು

    ರಮೇಶ ಜಹಗೀರದಾರ್ ದಾವಣಗೆರೆ  ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ (ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ) ಮೂಲಕ ಮಾಡಿರುವ ಸಾಧನೆಗಾಗಿ ದಾವಣಗೆರೆ ಸೇರಿ ರಾಜ್ಯದ 4 ಸ್ಮಾರ್ಟ್‌ಸಿಟಿಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿವೆ.  ಬೆಂಗಳೂರು, ಬೆಳಗಾವಿ ಮತ್ತು ತುಮಕೂರು ಸ್ಮಾರ್ಟ್‌ಸಿಟಿಗಳೂ ತಮ್ಮ ಕಾರ್ಯ ನಿರ್ವಹಣೆಯ ಮೂಲಕ ಗಮನ ಸೆಳೆದಿವೆ. ಆಡಳಿತದ ಸುಗಮ ನಿರ್ವಹಣೆ, ಸೈಬರ್ ಸುರಕ್ಷತೆ, ಬಿಜಿನೆಸ್ ಪ್ಲಾೃನ್, ತಂಡದ ನಿರ್ವಹಣೆ, ಸರ್ಕಾರದ ಇಲಾಖೆಗಳ ನಡುವಿನ ಸಮನ್ವಯ, ಹೊಸ ಆವಿಷ್ಕಾರಗಳು ಸೇರಿ 10 ಮಾನದಂಡಗಳನ್ನು ಆಧರಿಸಿ ರ‌್ಯಾಂಕಿಂಗ್ ನೀಡಲಾಗಿದೆ. ಎಲ್ಲ ಮಾನದಂಡಗಳಲ್ಲಿ ದಾವಣಗೆರೆ ಮುಂದಿದೆ ಎಂದು ಮೂಲಗಳು ತಿಳಿಸಿವೆ.  ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದ ತಂಡಗಳು ಕೆಲ ದಿನಗಳ ಹಿಂದೆ ದೇಶದ ವಿವಿಧ ನಗರಗಳಿಗೆ ತೆರಳಿ ಮೌಲ್ಯಮಾಪನ ಮಾಡಿದ್ದವು. ಗುರುವಾರ ದೆಹಲಿಯಲ್ಲಿ ನಡೆದ 100 ಸ್ಮಾರ್ಟ್‌ಸಿಟಿ ಸಿಇಒಗಳ ಸಮ್ಮೇಳನದಲ್ಲಿ ಕರ್ನಾಟಕದ ದಾವಣಗೆರೆ, ಬೆಂಗಳೂರು, ಬೆಳಗಾವಿ ಮತ್ತು ತುಮಕೂರು ಸ್ಮಾರ್ಟ್‌ಸಿಟಿಗಳು ಮಾಡಿರುವ ಕಾರ್ಯವನ್ನು ಗುರುತಿಸಿ ಪ್ರಮಾಣಪತ್ರ ನೀಡಲಾಯಿತು.  ಎಲ್ಲ ಸ್ಮಾರ್ಟ್‌ಸಿಟಿಗಳಲ್ಲಿ ಸಮಗ್ರ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ (ಐಸಿಸಿಸಿ)ಗಳಿವೆ. ಅವುಗಳು ಒಂದು ರೀತಿಯಲ್ಲಿ ಸ್ಮಾರ್ಟ್‌ಸಿಟಿಯ ನರಮಂಡಲದಂತೆ ಕೆಲಸ ಮಾಡುತ್ತವೆ. ಪೊಲೀಸ್, ಶಿಕ್ಷಣ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ, ಕೆಎಸ್‌ಆರ್‌ಟಿಸಿ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಜತೆಗೆ ಸಮನ್ವಯ ಸಾಧಿಸಿ, ಮಾಹಿತಿಗಳ ವಿನಿಮಯ, ತಾಂತ್ರಿಕ ನೆರವು ನೀಡಿ ಉತ್ತಮ ಆಡಳಿತಕ್ಕಾಗಿ ಜಿಲ್ಲಾಡಳಿತಗಳಿಗೆ ಆಸರೆಯಾಗಿವೆ.  ಈ ಕೇಂದ್ರಗಳಲ್ಲಿ ಆಗಿರುವ ಚಟುವಟಿಕೆಗಳು, ನಡೆಸಿರುವ ಸಭೆಗಳು, ದಾಖಲೆಗಳ ನಿರ್ವಹಣೆ, ಸಿಬ್ಬಂದಿಯ ಗುಣಮಟ್ಟ, ಸಮುದಾಯಕ್ಕೆ ಆಗಿರುವ ಲಾಭಗಳು ಇವೇ ಮುಂತಾದ ಅಂಶಗಳನ್ನು ಮುಂದಿಟ್ಟುಕೊಂಡು ಈ ನಗರಗಳನ್ನು ಆಯ್ಕೆ ಮಾಡಲಾಗಿದೆ.  …  (ಬಾಕ್ಸ್)  ಯೋಜನೆಯ ಭವಿಷ್ಯ ಇನ್ನೂ ಅಸ್ಪಷ್ಟ  ಸ್ಮಾರ್ಟ್‌ಸಿಟಿ ಯೋಜನೆಯ ಅವಧಿಯು ಜೂನ್ ತಿಂಗಳಿಗೆ ಮುಗಿಯಲಿದೆ. ಹಾಗಾದರೆ ದೇಶದಲ್ಲಿರುವ 100 ಸ್ಮಾರ್ಟ್‌ಸಿಟಿಗಳ ಭವಿಷ್ಯ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.  ಯೋಜನೆಯನ್ನು ಒಂದು ವರ್ಷ (2025ರ ಮಾರ್ಚ್ ವರೆಗೆ) ವಿಸ್ತರಿಸುವ ಸಾಧ್ಯತೆಯಿದೆ. ಈ ವಿಷಯ ಕೇಂದ್ರ ಸಚಿವ ಸಂಪುಟದ ಮುಂದಿದ್ದು ಅಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ ಎನ್ನುತ್ತವೆ ಉನ್ನತ ಮೂಲಗಳು.  ಆದರೆ ಇದುವರೆಗೆ ಈ ಕುರಿತು ಯಾವುದೇ ಲಿಖಿತ ಆದೇಶ ಬಂದಿಲ್ಲ. ಯೋಜನೆ ಮುಂದುವರಿಯುವುದೆ ಇಲ್ಲವೆ ಎಂಬುದು ಅಧಿಕಾರಿಗಳಿಗೂ ಸ್ಪಷ್ಟವಾಗಿಲ್ಲ.  ಈ ನಡುವೆ ಸ್ಮಾರ್ಟ್‌ಸಿಟಿಗಳು ತಮ್ಮದೇ ಆದ ಬಿಜಿನೆಸ್ ಪ್ಲಾೃನ್ ಸಿದ್ಧಪಡಿಸಿಕೊಳ್ಳುತ್ತಿವೆ. ಡಿಜಿಟಲ್ ಡಿಸ್‌ಪ್ಲೆ ಬೋರ್ಡ್, ಸ್ಮಾರ್ಟ್ ಪಾರ್ಕಿಂಗ್, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇ-ಚಲನ್ ಮೂಲಕ ದಂಡ ವಿಧಿಸುವುದು, ವಿವಿಧ ಇಲಾಖೆಗಳಿಗೆ ಟೆಂಡರ್ ಸಿದ್ಧಪಡಿಸಿ ಕೊಡುವುದು, ಮೇಳಗಳನ್ನು ಆಯೋಜಿಸುವುದು ಹೀಗೆ ಆದಾಯ ತರಬಲ್ಲ ವಿಷಯಗಳನ್ನು ಪಟ್ಟಿ ಮಾಡಿ ಯೋಜನೆ ರೂಪಿಸಿವೆ.  …  (ಕೋಟ್)  ದಾವಣಗೆರೆ ಸ್ಮಾರ್ಟ್‌ಸಿಟಿಯ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮಾಡಿರುವ ಸಾಧನೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿರುವುದು ಹೆಮ್ಮೆ ತಂದಿದೆ. ಇದರ ಹಿಂದೆ ನಮ್ಮ ಸಿಬ್ಬಂದಿಯ ಪರಿಶ್ರಮ ಅಡಗಿದೆ. ಸರ್ಕಾರ ಯೋಜನೆಯನ್ನು ಮುಂದುವರಿಸಿದರೆ ಇನ್ನೂ ಉತ್ತಮ ಕೆಲಸ ಮಾಡಿ ಜನರಿಗೆ ಸೇವೆ ಒದಗಿಸಲು ಪ್ರಯತ್ನಿಸುತ್ತೇವೆ.   ವೀರೇಶ ಕುಮಾರ್, ಸ್ಮಾರ್ಟ್‌ಸಿಟಿ ಎಂಡಿ, ದಾವಣಗೆರೆ  …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts