More

    ಮಳೆ ಕೊರತೆಯಿಂದ ಹಲವೆಡೆ ಬಿತ್ತನೆ ಕುಂಠಿತ

    ದಾವಣಗೆರೆ : ಮಳೆ ಕೊರತೆಯಿಂದ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ, ಬಸಾಪುರ ಮತ್ತಿತರ ಕಡೆಗಳಲ್ಲಿ ಬಿತ್ತನೆಯಾಗಿಲ್ಲ ಎಂದು ಕೃಷಿ  ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು.  ನಗರದ ನೂತನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಗೆ ಇಲಾಖೆಯ ಪ್ರಗತಿ ವರದಿ ಒಪ್ಪಿಸಿದರು.  ಜನವರಿಯಿಂದ ಜೂನ್‌ವರೆಗೆ ಸಾಮಾನ್ಯವಾಗಿ 146 ಮಿ.ಮೀ. ಮಳೆಯಾಗಬೇಕು. ಆದರೆ, ವಾಡಿಕೆಗಿಂತ ಹೆಚ್ಚು 162 ಮಿ.ಮೀ.  ಮಳೆಯಾಗಿದ್ದರೂ ಎಲ್ಲ ಕಡೆ ಸುರಿದಿಲ್ಲ. ಹಲವೆಡೆ ಮಳೆ ಕೊರತೆಯಾಗಿದೆ ಎಂದರು.  ತಾಲೂಕಿನಲ್ಲಿ 30,768 ಹೆಕ್ಟೇರ್‌ನಲ್ಲಿ ಭಿತ್ತನೆಯಾಗಿದೆ. ಈ ಪೈಕಿ 27,370 ಹೆಕ್ಟೇರ್ ಮೆಕ್ಕೇಜೋಳ, 3,230 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. 18,110 ಹೆಕ್ಟೇರ್‌ನಲ್ಲಿ ಭತ್ತ ನಾಟಿ ನಡೆಯಲಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಜಲಾಶಯದ ನೀರನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.  8 ಅಂಗಡಿಗಳು ಸೀಜ್: ತಾಲೂಕಿನಲ್ಲಿ 278 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಯಾವುದೇ ಬಿತ್ತನೆ ಬೀಜದ ಕೊರತೆ ಇಲ್ಲ. ತಾಲೂಕಿನಲ್ಲಿ ಅನಧಿಕೃತ ಬಿತ್ತನೆ ಬೀಜ ಮಾರಾಟದ 8 ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.  — ಬಾಕ್ಸ್–  ಜಾನುವಾರುಗಳಿಗೆ ಚಪ್ಪೆರೋಗ ಲಸಿಕೆ  ಮಳೆಗಾಲದಲ್ಲಿ ಜಾನುವಾರುಗಳಿಗೆ ಚಪ್ಪೆರೋಗ ಕಾಣಿಸಿಕೊಳ್ಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 50 ಸಾವಿರ ಜಾನುವಾರುಗಳಿಗೆ ಲಸಿಕೆ ತರಿಸಲಾಗಿದೆ. ಆದರೆ, ವ್ಯಾಕ್ಸಿನ್ ನೀಡಲು ಸಿಬ್ಬಂದಿ ಕೊರತೆಯಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದರು.  ನೀರಾವರಿ ಸೌಲಭ್ಯವಿರುವ ರೈತರಿಗೆ ಮಾರ್ಚ್ ವೇಳೆಗೆ 2 ಸಾವಿರ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಮಳೆಗಾಲದಲ್ಲಿ ಸುಮಾರು 650 ಮೇವಿನ ಕಿಟ್ ವಿತರಿಸುವ ಗುರಿ ಇದ್ದು, ಸದ್ಯಕ್ಕೆ 150 ಕಿಟ್‌ಗಳು ಮಾತ್ರ ಲಭ್ಯವಿವೆ ಎಂದರು.  ಬಾಕ್ಸ್  ಮಳೆ ಕೊರತೆಯಿಂದ ನರೇಗಾ ಯೊಜನೆಯಡಿ ತೋಟಗಾರಿಕೆಗೆ ರೈತರು ಆಸಕ್ತಿ ತೋರಿಸುತ್ತಿಲ್ಲ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದರು.  ಅಡಕೆ, ದಾಳಿಂಬೆ, ವೀಳ್ಯೆದೆಲೆ ಬೆಳೆಗಳಿಗೆ ಬೆಳೆವಿಮೆ ಮಾಡಿಸುವ ದಿನಾಂಕ ಸೋಮವಾರ ಮುಕ್ತಾಯಗೊಂಡಿದೆ. ಹನಿ ನೀರಾವರಿ ಯೋಜನೆ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಿಲ್ಲ ಎಂದರು.  11ಡೆಂೆ ಪ್ರಕರಣ ಪತ್ತೆ  ತಾಲೂಕಿನಲ್ಲಿ 11 ಡೆಂೆ ಪ್ರಕರಣಗಳು ದೃಢಪಟ್ಟಿವೆ. ರೋಗ ತಡೆಗೆ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗಿದೆ. ಆಶಾ ಕಾರ್ಯಕರ್ತೆಯರ ಜತೆಗೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ ಎಂದು ಟಿಎಚ್‌ಓ ದೇವರಾಜ್ ಹೇಳಿದರು.  ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.  – ಬಾಕ್ಸ್-  ಭಯವೋಮೆಟ್ರಿಕ್ ಹಾಜರಾತಿ ಕಡ್ಡಾಯ  ತಾಲೂಕಿನ ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಎಲ್.ಎ. ಕೃಷ್ಣಾನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.  ಎಲ್ಲ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ಸೂಚನೆ ನೀಡಿದ್ದರೂ ಕೆಲವರು ಇನ್ನೂ ಆ ಕಾರ್ಯಕ್ಕೆ ಮುಂದಾಗಿಲ್ಲ. ನೌಕರರು ಬೇಕಾಬಿಟ್ಟಿಯಾಗಿ ಕಚೇರಿಗೆ ಬಂದು ಹೋಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.  ಯಾವುದೇ ಇಲಾಖೆ ಅಧಿಕಾರಿಗಳು ಬೆಳಗ್ಗೆ 10.15ಕ್ಕೆ ಕೆಲಸಕ್ಕೆ ಹಾಜರಾಗಬೇಕು. ಮಧ್ಯಾಹ್ನ 1.15ರ ಊಟದ ಬಿಡುವಿನ ನಂತರ 2.15ಕ್ಕೆ ಹಾಜರಿರಬೇಕು. ಅರ್ಧಗಂಟೆ ತಡವಾಗಿ ಬಂದರೆ ಅರ್ಧದಿನದ ಸಂಬಳ ಕಡಿತಗೊಳಿಸಿ ಎಂದು ಆದೇಶಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts