More

    ಅಪರೂಪದ ಸ್ತ್ರೀ ಸಾಹಿತ್ಯ ರತ್ನ ಡಾ.ಕಮಲಾ ಹಂಪನಾ

    ದಾವಣಗೆರೆ : ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ, ಅಪರೂಪದ ಸಾಹಿತ್ಯ ಸ್ತ್ರೀ ರತ್ನ ನಾಡೋಜ ಡಾ.ಕಮಲಾ ಹಂಪನಾ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಬಣ್ಣಿಸಿದರು.
    ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತಾಡಿದರು.
    ಕಮಲಾ ಹಂಪನಾ ಅವರು 50ಕ್ಕೂ ಹೆಚ್ಚು ಕೃತಿ ರಚಿಸಿ, ಸಾಧನೆ ಮೆರೆದಿದ್ದಾರೆ. ಸಾಹಿತ್ಯಕ ಸೇವೆ, ಸಾಧನೆ, ಅನುಭವ ಹಾಗೂ ವಯಸ್ಸಿನಲ್ಲಿ ಶ್ರೇಷ್ಠತೆಯ ಪರಾಕಾಷ್ಠೆ ತಲುಪಿದ್ದರು. ದಾವಣಗೆರೆಯೊಂದಿಗೆ ಅವಿನಾಭವ ಸಂಬಂಧ ಹೊಂದಿದ್ದರು ಎಂದು ತಿಳಿಸಿದರು.
    ವಿಶ್ರಾಂತ ಉಪನ್ಯಾಸಕ ಸುಭಾಷ್‌ಚಂದ್ರ ಬೋಸ್ ಮಾತನಾಡಿ, ಕಮಲಾ ಹಂಪನಾ ದಂಪತಿ ಜಾತಿ, ಧರ್ಮ ಮೀರಿ ಸಾಹಿತ್ಯಕ ಕೃಷಿ ಮಾಡಿ ಸಾಹಿತ್ಯ ವಲಯದಲ್ಲಿ ಅಪರೂಪದ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರವಿಚಂದ್ರ ಅವರು ನಾಡೋಜ ಡಾ.ಕಮಲಾ ಹಂಪನಾ ಅವರ ಒಡನಾಟ ಸ್ಮರಿಸಿದರು.
    ಪರಿಷತ್ತಿನ ಕೋಶಾಧ್ಯಕ್ಷ ಹಾಗೂ ಕಾರ್ಮಿಕ ನಾಯಕ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಮಲಾ ಹಂಪನಾ ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿದ್ದರು ಎಂದು ಸ್ಮರಿಸಿದರು.
    ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ಸತ್ಯಭಾಮ ಮಂಜುನಾಥ್, ಎಸ್.ಎಂ.ಮಲ್ಲಮ್ಮ, ಲೇಖಕ ನಾಗರಾಜ್ ಸಿರಿಗೆರೆ ನುಡಿನಮನ ಸಲ್ಲಿಸಿದರು.
    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಮಂಜಣ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ ದಿಳ್ಯಪ್ಪ, ರೇವಣಸಿದ್ಧಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಸಿ ಜಿ ಜಗದೀಶ್ ಕೂಲಂಬಿ, ಪತ್ರಕರ್ತ ಜಿಗಳಿ ಪ್ರಕಾಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts