More

    ಜಿಎಂ ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ

    ದಾವಣಗೆರೆ : ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಸ್ಥಾಪಕರ ದಾವಣಗೆರೆ : \n ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಸ್ಥಾಪಕರ ದಿನಾಚರಣೆ ಮಾಡಲಾಯಿತು.\n ತುಮಕೂರು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಗೌಡರ ಮಲ್ಲಿಕಾರ್ಜುನಪ್ಪ ಮತ್ತು ತುಮಕೂರಿನ ಮಾಜಿ ಸಂಸದ ಜಿ.ಎಸ್. ಬಸವರಾಜು ಅವರ ಒಡನಾಟವನ್ನು ಸ್ಮರಿಸಿದರು.\n ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ನಮ್ಮ ತಂದೆಯವರ ಆಸೆಯಂತೆ ಅವರು ಕಟ್ಟಿದ ಈ ಶಿಕ್ಷಣ ಸಂಸ್ಥೆ ಇಂದು ಹಲವರಿಗೆ ಆಸರೆಯಾಗಿ ವಿದ್ಯೆಯನ್ನು ನೀಡುತ್ತ ಮಧ್ಯ ಕರ್ನಾಟಕದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು, ತಂದೆಯವರೊಡನೆ ಇದ್ದ ಬಾಂಧವ್ಯದ ಮೆಲುಕು ಹಾಕಿದರು.\n ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಅವರು ‘ಶಿಕ್ಷಣದ ಮಹತ್ವ ಮತ್ತು ನಮ್ಮ ಸಂಪ್ರದಾಯ’ ಎಂಬ ವಿಷಯದ ಬಗ್ಗೆ ಮಾತನಾಡಿದರು.\n ಪಿಎಚ್.ಡಿ ಪಡೆದ ಅಧ್ಯಾಪಕರಿಗೆ ಬೆಳ್ಳಿ ಪದಕ ಮತ್ತು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಫ್ಯಾಕಲ್ಟಿ ಎಕ್ಸಲೆನ್ಸ್ ಅವಾರ್ಡ್ ಪಡೆದ ಅಧ್ಯಾಪಕರಿಗೂ ಬೆಳ್ಳಿ ಪದಕ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.\n ಗಾಯತ್ರಿ ಸಿದ್ದೇಶ್ವರ, ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿ ವೈ.ಯು. ಸುಭಾಷ್ ಚಂದ್ರ, ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ್, ಜಿಲ್ಲಾ ಬಿಜೆಪಿ ಮುಖಂಡರು, ಜಿಎಂಐಟಿ ಮಾಜಿ ಪ್ರಾಚಾರ್ಯರು, ಜಿಎಂ ಸಮೂಹ ಸಂಸ್ಥೆಗಳ ಅಧ್ಯಾಪಕರು ಇದ್ದರು. ಗೌಡರ ಮಲ್ಲಿಕಾರ್ಜುನಪ್ಪ ಅವರು ನಡೆದು ಬಂದ ಹಾದಿ, ಶಿಕ್ಷಣದಲ್ಲಿ ತೋರಿದ ಪ್ರೀತಿ ಮತ್ತು ಸಮಾಜ ಸೇವೆಯನ್ನು 20 ನಿಮಿಷಗಳ ವಿಡಿಯೋ ಮೂಲಕ ಪ್ರಸ್ತುತ ಪಡಿಸಲಾಯಿತು.\n ವಿವಿಯ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಸ್ವಾಗತಿಸಿದರು. ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಸಂಜಯ್ ಪಾಂಡೆ ವಂದಿಸಿದರು.\n\n\n\n\n\n\n\nದಿನಾಚರಣೆ ಮಾಡಲಾಯಿತು.
    ತುಮಕೂರು ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಗೌಡರ ಮಲ್ಲಿಕಾರ್ಜುನಪ್ಪ ಮತ್ತು ತುಮಕೂರಿನ ಮಾಜಿ ಸಂಸದ ಜಿ.ಎಸ್. ಬಸವರಾಜು ಅವರ ಒಡನಾಟವನ್ನು ಸ್ಮರಿಸಿದರು.
    ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ನಮ್ಮ ತಂದೆಯವರ ಆಸೆಯಂತೆ ಅವರು ಕಟ್ಟಿದ ಈ ಶಿಕ್ಷಣ ಸಂಸ್ಥೆ ಇಂದು ಹಲವರಿಗೆ ಆಸರೆಯಾಗಿ ವಿದ್ಯೆಯನ್ನು ನೀಡುತ್ತ ಮಧ್ಯ ಕರ್ನಾಟಕದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು, ತಂದೆಯವರೊಡನೆ ಇದ್ದ ಬಾಂಧವ್ಯದ ಮೆಲುಕು ಹಾಕಿದರು.
    ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಬಿ. ಪ್ರಭಾಕರ ಅವರು ‘ಶಿಕ್ಷಣದ ಮಹತ್ವ ಮತ್ತು ನಮ್ಮ ಸಂಪ್ರದಾಯ’ ಎಂಬ ವಿಷಯದ ಬಗ್ಗೆ ಮಾತನಾಡಿದರು.
    ಪಿಎಚ್.ಡಿ ಪಡೆದ ಅಧ್ಯಾಪಕರಿಗೆ ಬೆಳ್ಳಿ ಪದಕ ಮತ್ತು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಫ್ಯಾಕಲ್ಟಿ ಎಕ್ಸಲೆನ್ಸ್ ಅವಾರ್ಡ್ ಪಡೆದ ಅಧ್ಯಾಪಕರಿಗೂ ಬೆಳ್ಳಿ ಪದಕ ಮತ್ತು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.
    ಗಾಯತ್ರಿ ಸಿದ್ದೇಶ್ವರ, ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿ ವೈ.ಯು. ಸುಭಾಷ್ ಚಂದ್ರ, ಆಡಳಿತ ಮಂಡಳಿ ಸದಸ್ಯ ಡಾ. ಕೆ. ದಿವ್ಯಾನಂದ್, ಜಿಲ್ಲಾ ಬಿಜೆಪಿ ಮುಖಂಡರು, ಜಿಎಂಐಟಿ ಮಾಜಿ ಪ್ರಾಚಾರ್ಯರು, ಜಿಎಂ ಸಮೂಹ ಸಂಸ್ಥೆಗಳ ಅಧ್ಯಾಪಕರು ಇದ್ದರು. ಗೌಡರ ಮಲ್ಲಿಕಾರ್ಜುನಪ್ಪ ಅವರು ನಡೆದು ಬಂದ ಹಾದಿ, ಶಿಕ್ಷಣದಲ್ಲಿ ತೋರಿದ ಪ್ರೀತಿ ಮತ್ತು ಸಮಾಜ ಸೇವೆಯನ್ನು 20 ನಿಮಿಷಗಳ ವಿಡಿಯೋ ಮೂಲಕ ಪ್ರಸ್ತುತ ಪಡಿಸಲಾಯಿತು.
    ವಿವಿಯ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಸ್ವಾಗತಿಸಿದರು. ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಎಂ.ಬಿ. ಸಂಜಯ್ ಪಾಂಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts