More

    ಕೆಂಪೇಗೌಡರಿಂದ ಆರ್ಥಿಕ ಪುನಶ್ಚೇತನಕ್ಕೆ ಒತ್ತು

    ದಾವಣಗೆರೆ : ನಾಡಪ್ರಭು ಕೆಂಪೇಗೌಡರು ಸುಸಜ್ಜಿತ ಬೆಂಗಳೂರು ನಗರ ನಿರ್ಮಿಸದಿದ್ದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಕುಂಠಿತಗೊಳ್ಳುತ್ತಿತ್ತು. ಅವರು ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಿದ್ದರಿಂದಲೇ ಬೆಂಗಳೂರು ದೇಶದಲ್ಲಿಒತ್ತು ನೀಡಿದ್ದರಿಂದಲೇ ಬೆಂಗಳೂರು ದೇಶದಲ್ಲಿಯೇ ಮಹಾನಗರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.\n ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ, ಮಾತನಾಡಿದರು.\n ದೇಶದಲ್ಲಿಯೇ ಬೆಂಗಳೂರು ಮಹಾನಗರ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿಯಯೇ ಮಹಾನಗರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
    ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತ್ಯುತ್ಸವ ಉದ್ಘಾಟಿಸಿ, ಮಾತನಾಡಿದರು.
    ದೇಶದಲ್ಲಿಯೇ ಬೆಂಗಳೂರು ಮಹಾನಗರ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕಿ ಚನ್ನೈ, ಹೈದರಾಬಾದ್‌ನ್ನು ಹಿಂದಿಕ್ಕಿದೆ. ರಾಜ್ಯದ ಒಟ್ಟು ಬಜೆಟ್ 2.35 ಲಕ್ಷ ಸಾವಿರ ಕೋಟಿ ರೂ. ಗಳಿದ್ದು, ಕೇವಲ ಬೆಂಗಳೂರು ಒಂದರಿಂದಲೇ 2 ಲಕ್ಷ ಕೋಟಿ ರೂ. ಹಣ ಬರುತ್ತಿದೆ ಎಂದು ತಿಳಿಸಿದರು.
    ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ 38 ವರ್ಷ ರಾಜ್ಯಭಾರ ಮಾಡಿದ ಕೆಂಪೇಗೌಡರು ದೂರದೃಷ್ಟಿ, ಸಮನ್ವಯತೆ, ಕ್ರಿಯಾಶೀಲತೆ ಸೂತ್ರ ಬಳಸಿ ಬೆಂಗಳೂರು ನಿರ್ಮಿಸುವ ಜತೆಗೆ ಸುಸ್ಥಿರ ಅಭಿವೃದ್ಧಿಗೆ ಅಡಿಪಾಯ ಹಾಕಿದರು ಎಂದು ಸ್ಮರಿಸಿದರು.
    ಕೆಂಪೇಗೌಡರು ಒಂದು ನಗರ ಮಾತ್ರ ನಿರ್ಮಿಸಲಿಲ್ಲ. ಎಲ್ಲ ಜನರ ಉತ್ತ ಮ ಜೀವನಕ್ಕೆ ಹತ್ತು ಹಲವು ಯೋಜನೆ ರೂಪಿಸಿ ಕಾರ್ಯಗತಗೊಳಿಸಿದರು. ಸುಸಜ್ಜಿತ ಕೆರೆ-ಕಟ್ಟೆಗಳನ್ನು ಕಟ್ಟಿ ಕೃಷಿ ಚಟುವಟಿಕೆಗೆ ಉತ್ತೇಜಿಸಿದರು.
    ಕುಲಕಸುಬು ಆಧರಿತ ಆರ್ಥಿಕ ಚಟುವಟಿಕೆಗೆ ಪೇಟೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಿದರು. ರಾಜ್ಯದ ಸಂಸ್ಕೃತಿ, ಕಲಾ ವೈಭವವನ್ನು ಉನ್ನತೀಕರಣ ಗೊಳಿಸಿದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts