More

    ಎಡೆಕುಂಟೆ ಹೊಡೆಯಲು ಬಂತು ಟ್ರ್ಯಾಕ್ಟರ್

    ಮಾಯಕೊಂಡ: ಕೃಷಿಯಲ್ಲಿ ಯಾಂತ್ರೀಕರಣ ಅಬ್ಬರದಿಂದ ರೈತ ಮಿತ್ರ ಎತ್ತುಗಳ ಬೇಸಾಯ ಪದ್ಧತಿ ದಿನೇ ದಿನೆ ಮರೆಯಾಗುತ್ತಿದ್ದು, ಮೆಕ್ಕೆಜೋಳ ಬೆಳೆಯುವ ರೈತರು ಎಡೆಕುಂಟೆ ಹೊಡೆಯಲು ಟ್ರಾೃಕ್ಟರ್ ಬಳಸಲು ಆರಂಭಿಸಿದ್ದಾರೆ.

    ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ಪೂಜಾರ್ ರಾಜು ಎಂಬ ಯುವ ರೈತ ಮೆಕ್ಕೆಜೋಳದಲ್ಲಿ ಎಡೆಕುಂಟೆ ಹೊಡೆಯಲು ಟ್ರ್ಯಾಕ್ಟರ್ ಬಳಸುವ ಮೂಲಕ ಕೃಷಿಯಲ್ಲಿ ಹೊಸ ಮಾರ್ಗ ತೋರಿಸಿಕೊಟ್ಟಿದ್ದಾರೆ.

    ಆನಗೋಡು, ಅಣಜಿ ಹಾಗೂ ಮಾಯಕೊಂಡ ಹೋಬಳಿಗಳ ನೂರಾರು ಗ್ರಾಮಗಳ ರೈತರ ಮೂಲಬೆಳೆ ಮೆಕ್ಕೆಜೋಳ ಆಗಿದೆ. ಈ ಬೆಳೆಯನ್ನು ಬೆಳೆಯಲು ಟ್ರ್ಯಾಕ್ಟರ್ ಹಾಗೂ ಎತ್ತುಗಳನ್ನು ಬಳಸಲಾಗುತ್ತದೆ. ಆದರೆ, ಬಿತ್ತನೆಯಾಗಿ ಸಸಿಗಳು ಬೆಳೆದು ನಿಂತಾಗ ಎತ್ತಿನ ಬೇಸಾಯದಲ್ಲಿ ಎಡೆಕುಂಟೆ ಹೊಡೆಯುವ ಪದ್ಧತಿ ರೂಢಿಯಲ್ಲಿತ್ತು.

    ಆದರೆ, ಈಗ ಗ್ರಾಮಗಳಲ್ಲಿ ಬೆರಳೆಣಿಕೆಯಷ್ಟು ಎತ್ತುಗಳ ಸಂಖ್ಯೆ ಇದ್ದು ಎಡೆಕುಂಟೆ ಹೊಡೆಯಲು ಎತ್ತುಗಳಿಗೆ ಬೇಡಿಕೆ ಇರುತ್ತದೆ. ಹಾಗಾಗಿ, ಒಂದು ಎಕರೆ ಎಡೆಕುಂಟೆ ಹೊಡೆಯಲು 1000 ರೂ.ಗಿಂತ ಹೆಚ್ಚಿನದಾಗಿ ಬಾಡಿಗೆ ಪಡೆಯುತ್ತಿದ್ದಾರೆ.

    ದಿನವೊಂದಕ್ಕೆ ಮೂರರಿಂದ ನಾಲ್ಕು ಎಕರೆ ಮಾತ್ರ ಎತ್ತುಗಳಲ್ಲಿ ಕುಂಟೆ ಹೊಡೆಯಬಹುದು. ಆದರೆ, ಗುಮ್ಮನೂರು ಗ್ರಾಮದ ರೈತ ಟ್ರ್ಯಾಕ್ಟರ್‌ನಲ್ಲಿ ಕುಂಟೆ ಹೊಡೆಯುವುದನ್ನು ಕೃಷಿಕರಿಗೆ ತೋರಿಸಿದ್ದಾರೆ.

    ಎಡೆಕುಂಟೆ ಹೊಡೆಯುವುದು ಹೇಗೆ: ಟ್ರ್ಯಾಕ್ಟರ್ ಇಂಜಿನ್‌ನಲ್ಲಿರುವ ನಾಲ್ಕು ಟೈರ್‌ಗಳನ್ನು ಬಿಚ್ಚಿ ಕಬ್ಬಿಣದ ಗಾಲಿಗಳನ್ನು ಅಳವಡಿಕೆ ಮಾಡಿಕೊಂಡು ಟ್ರ್ಯಾಕ್ಟರ್ ಇಂದಿನ ಕಂಬಿಗಳಿಗೆ ಎಡೆಕುಂಟೆ ನೊಗ ಕಟ್ಟಿಕೊಂಡು ಅವುಗಳಿಗೆ ಐದು ಎಡೆಕುಂಟೆಗಳನ್ನು ಅಳವಡಿಸಿಕೊಂಡು ಮೆಕ್ಕೆಜೋಳದ ಸಾಲುಗಳಲ್ಲಿ ಕುಂಟೆ ಹೊಡೆಯಲಾಗುತ್ತದೆ ಎಂದು ಯುವ ರೈತ ಪೂಜಾರ್ ರಾಜು ಮಾಹಿತಿ ನೀಡಿದರು. ಕಬ್ಬಿಣದ ಗಾಲಿಗಳನ್ನು ಮಾಡಿಸಲು 36ರಿಂದ 40 ಸಾವಿರ ರೂ.ವರೆಗೆ ಖರ್ಚು ಬರುತ್ತದೆ. ದಿನಕ್ಕೆ 12ರಿಂದ 15 ಎಕರೆ ಎಡೆಕುಂಟೆ ಹೊಡೆಯಬಹುದು ಎನ್ನುತ್ತಾರೆ ರೈತ.

    ಎಡೆಕುಂಟೆ ಹೊಡೆಯಲು ಬಂತು ಟ್ರ್ಯಾಕ್ಟರ್

    ಕೃಷಿ, ತೋಟಗಾರಿಕಾ ಕೃಷಿ ಭೂಮಿಗಳಲ್ಲಿ ಕೆಲಸ- ಕಾರ್ಯಗಳನ್ನು ಮಾಡಲು ಕೇವಲ ಎತ್ತುಗಳ ಬೇಸಾಯ ಅವಲಂಬಿಸದೆ ಟ್ರ್ಯಾಕ್ಟರ್ ನ್ನು ಅತಿ ಹೆಚ್ಚು ಬಳಕೆಯಿಂದ ಕಡಿಮೆ ಸಮಯದಲ್ಲಿ ನಿರೀಕ್ಷಿತ ಕೆಲಸ ಮಾಡಿಕೊಳ್ಳಬಹುದು.
    l ಆವರಗೆರೆ ರುದ್ರಮುನಿ, ರೈತ ಚಿಂತಕರು.

    ಎಡೆಕುಂಟೆ ಹೊಡೆಯಲು ಬಂತು ಟ್ರ್ಯಾಕ್ಟರ್

    ಭರಮಸಾಗರದ ಒಂದು ಇಂಜಿನಿಯರಿಂಗ್ ವರ್ಕ್‌ನಲ್ಲಿ 40ಸಾವಿರ ರೂ. ಖರ್ಚು ಮಾಡಿ, ಎಡೆಕುಂಟೆ ಹೊಡೆಯಲು ಬೇಕಾಗುವಂತೆ ಯಂತ್ರ ತಯಾರಿಸಿಕೊಂಡು ಟ್ರಾೃಕ್ಟರ್‌ಗೆ ಅಳವಡಿಸಿಕೊಂಡಿದ್ದೇವೆ. ದಿನಕ್ಕೆ 12ರಿಂದ 15 ಎಕರೆ ಹೊಡೆಯುತ್ತೇವೆ.
    l ಪೂಜಾರ್ ರಾಜು, ಯುವ ರೈತ, ಗುಮ್ಮನೂರು.

    ಎಡೆಕುಂಟೆ ಹೊಡೆಯಲು ಬಂತು ಟ್ರ್ಯಾಕ್ಟರ್

    ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚು ಹಾಗೂ ಸಮಯದಲ್ಲಿ ಕೃಷಿ ಚಟುವಟಿಕೆ ಮಾಡಬಹುದು. ಬಹುಬೆಳೆ ಪದ್ಧತಿ ಅನುಸರಿಸಿದರೆ ಅಧಿಕ ಲಾಭ ಗಳಿಸಬಹುದು.
    l ಡಿ.ಎಂ.ಶ್ರೀಧರ್ ಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts