More

    ದರ್ಶನ್ ಫಾರ್ಮ್​ಹೌಸ್ ಮ್ಯಾನೇಜರ್ ಸಾವು ಕೇಸ್ ರೀ ಓಪನ್ ಬಗ್ಗೆ ಡಾ ಜಿ ಪರಮೇಶ್ವರ್ ಪ್ರತಿಕ್ರಿಯೆ..!

    ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದರ್ಶನ್​ ಅವರ ವಿರುದ್ಧವಾಗಿ ಒಂದೊಂದೆ ಪ್ರಕರಣಗಳು ಹೊರಗೆ ಬರುತ್ತಿವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳ ಪೈಕಿ 15ನೇ ಆರೋಪಿಯಾಗಿರುವ ಕಾರ್ತಿಕ್​​ ಅಲಿಯಾಸ್​ ಕಪ್ಪೆ ಈಗಾಗಲೇ ಒಂದು ಪ್ರಕರಣದಿಂದ ಹೊರಗೆ ಬರುತ್ತಿದ್ದಂತೆ ಮತ್ತೆ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.

    ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗುತ್ತಿದ್ದಂತೆ ದರ್ಶನ್ ಅವರ ಹಳೆಯ ವಿವಾದಗಳಿಗೂ ಜೀವ ಬಂದಿದೆ. ಅದೇ ನಿಟ್ಟಿನಲ್ಲಿ ಏಳು ವರ್ಷಗಳಿಂದ ನಾಪತ್ತೆಯಾಗಿರುವ ದರ್ಶನ್ ಅವರ ಮ್ಯಾನೇಜರ್ ಬಗ್ಗೆಯೂ ಗುಸುಗುಸು ಕೇಳಿಬಂದಿದೆ. ಕೆಲವು ಮಾಧ್ಯಮಗಳು ಅದೇ ವಿಚಾರವಾಗಿ ಹಲವಾರು ಅನುಮಾನಾರ್ಥಕ ಪ್ರಶ್ನೆಗಳನ್ನಿಟ್ಟು ವರದಿಗಳನ್ನೂ ಪ್ರಕಟಿಸಿವೆ. ಸದ್ಯ ಪ್ರಕರಣದ ಕುರಿತಂತೆ ಗೃಹ ಸಚಿವರಾದ ಜಿ. ಪರಮೇಶ್ವರ್​ ಪ್ರತಿಕ್ರಿಯೆಯನ್ನ ಕೊಟ್ಟಿದ್ದಾರೆ.

    ದರ್ಶನ್​​​ ಕೊಲೆ ಕೇಸ್​​ಗೂ ಹಾಗು ದರ್ಶನ್​ ಮ್ಯಾನೇಜರ್​ ಮಲ್ಲಿಕಾರ್ಜುನ್​​ ನಾಪತ್ತೆಯಾಗಿರುವ ಕೇಸ್​​ಗೂ ಸಂಬಂಧವಿದ್ರೆ ಅದನ್ನ ಎಸ್​​ಐಟಿ ನೋಡಿಕೊಳ್ಳುತ್ತೆ. ಆ ಹಳೆಯ ಕೇಸನ್ನ ರೀಓಪನ್​ ಮಾಡ್ಬೇಕು ಅಂದ್ರೆ ಎಸ್​​ಐಟಿ ಸರ್ಕಾರವನ್ನ ಕೇಳ್ತಾರೆ. ಅವರು ಯಾವ ಕಾರಣ ಕೊಟ್ಟಿರ್ತಾರೆ ಅದನ್ನೆಲ್ಲಾ ನೋಡ್ಕೊಂಡು ನಾವು ತೀರ್ಮಾನವನ್ನ ತಗೊಳ್ತೇವೆ. ರೇಣುಕಾಸ್ವಾಮಿ ಕೊಲೆಯಾಗಿರೊದ್ರಿಂದ ಮ್ಯಾನೇಜರ್​ ನಾಪತ್ತೆಯಾಗಿರೋದಕ್ಕೂ ದರ್ಶನ್​ಗೂ ಸಂಬಂಧ ಇದೆ ಅಂತಾ ಅನ್ನಿಸೋದು ಸ್ವಾಭಾವಿಕ. ಇನ್ನು ಎಸ್​​ಐಟಿ ಏನಾದ್ರು ರೀ ಓಪನ್​ ಬಗ್ಗೆ ನಮಗೆ ಕೇಳಿದ್ರೆ ನಾವು ಅವರಿಗೆ ಅನುಮತಿ ಕೊಡ್ತೀವಿ ಅಂತಾ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

    ದರ್ಶನ್ ಕೂಡ ಮಲ್ಲಿಕಾರ್ಜುನ ಅವರ ಮೇಲೆ ಅತಿಯಾದ ನಂಬಿಕೆಯಿಟ್ಟು ತಮ್ಮ ಅನೇಕ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರಿಗೇ ಬಿಟ್ಟುಕೊಟ್ಟಿದ್ದರು ಎಂದು ಹೇಳಲಾಗಿದೆ. ದರ್ಶನ್ ಅವರು ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಆತ ದರ್ಶನ್ ಅವರಿಗೂ ಕೆಲವು ವ್ಯವಹಾರಗಳಲ್ಲಿ ಅವರಿಗೆ ಗೊತ್ತಿಲ್ಲದಂತೆಯೇ ಹಣ ಮಾಡಿಕೊಂಡಿದ್ದ ಎಂದು ಹೇಳಲಾಗಿತ್ತು. ಮಲ್ಲಿಕಾರ್ಜುನ್ ಬಿ ಸಂಕೇಗೌಡರ್‌ , ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ದರ್ಶನ್ ಅವರ ಚಿತ್ರಗಳ ಡೇಟ್ಸ್ ಗಳನ್ನು ನೋಡಿಕೊಳ್ಳುವುದು, ಅವರ ಇತರ ವ್ಯವಹಾರಗಳನ್ನು ನೋಡಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿದ್ದರು. ಆದರೆ, ಅಲ್ಲಿಂದ ಅವರು ಮತ್ತಷ್ಟು ಬೆಳೆಯಲು ಮುಂದಾದರು. ಇದೀಗ ದರ್ಶನ್​ ಕೊಲೆ ಕೇಸ್​​ನಲ್ಲಿ ಬಂಧನವಾಗಿದ್ದು, ಮ್ಯಾನೇಜರ್​ ನಾಪತ್ತೆಯಾಗಿರುವ ಕೇಸ್​ ಮತ್ತೆ ರೀಓಪನ್​ ಆಗುವಂತಹ ಸಾಧ್ಯತೆಗಳು ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts