More

    ಆನ್‌ಲೈನ್‌ನಲ್ಲಿ ವಿಕೃತ ಪೋಲಿ ಚಾಟಿಂಗ್: ಬಾಲಕನೊಬ್ಬನನ್ನು ಬಂಧಿಸಿದ ಪೊಲೀಸರು

    ನವದೆಹಲಿ: ಬಾಯ್ಸ ಲಾಕರ್ ರೂಂ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಗುಂಪು ರಚಿಸಿಕೊಂಡು ಸಾಮೂಹಿಕ ಅತ್ಯಾಚಾರ ಹೇಗೆ ಮಾಡುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚಾಟಿಂಗ್ ಮಾಡುತ್ತಿದ್ದ ಹುಡುಗರ ಪೈಕಿ ಒಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ದೆಹಲಿಯ ಪ್ರತಿಷ್ಠಿತ ಶಾಲೆ-ಕಾಲೇಜುಗಳಿಗೆ ಸೇರಿದ ಈ ಹುಡುಗರಿಗೆ ಇನ್ನೂ ಹದಿನೆಂಟು ವರ್ಷ ಕೂಡ ತುಂಬಿಲ್ಲ. ಆಗಲೇ ಇವರು ಆ ಗ್ರೂಪ್‌ನಲ್ಲಿ ಮಾಡುತ್ತಿದ್ದ ಚರ್ಚೆಗಳು, ಹಾಕುತ್ತಿದ್ದ ನಗ್ನ ಫೋಟೋಗಳನ್ನು ನೋಡಿದರೆ ಇವರೆಲ್ಲ ಎಷ್ಟು ವಿಕೃತ ಮನಸ್ಥಿತಿಗೆ ತಲುಪಿದ್ದಾರೆ ಎಂಬುದು ವೇದ್ಯವಾಗುತ್ತಿತ್ತು. ಆವರು ಆ ಗ್ರೂಪ್‌ನಲ್ಲಿ ಮಾಡಿದ ಚಾಟ್‌ಗಳ ಸ್ಕ್ರೀನ್ ಶಾಟ್‌ಗಳು ಭಾನುವಾರ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದವು. ದೇಶಾದ್ಯಂತ ಇದಕ್ಕೆ ತೀವ್ರ ಆಕ್ರೋಶವೂ ವ್ಯಕ್ತವಾಯಿತು. ಪೊಲೀಸರು ಕೂಡ ಎಚ್ಚೆತ್ತುಕೊಂಡು ಕೂಡಲೇ ಆ ಗ್ರೂಪನ್ನೇ ಡೀಆ್ಯಕ್ಟಿವೇಟ್ ಮಾಡಿಸಿದರು.

    ಇದನ್ನೂ ಓದಿ: ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?

    ಈ ಮಧ್ಯೆ ಮಹಿಳಾ ಆಯೋಗವು ಸೋಮವಾರ ಇಂಥದಕ್ಕೆಲ್ಲ ಅವಕಾಶ ನೀಡಿದ ನಿರ್ದಿಷ್ಟ ಜಾಲತಾಣಕ್ಕೆ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿತ್ತು. ಇದೀಗ ಶಾಲಾ ಬಾಲಕನೊಬ್ಬನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಪಿನಲ್ಲಿರುವ ಇತರ ಬಾಲಕರನ್ನೂ ಗುರುತಿಸಲಾಗಿದೆ.

    ಗುಂಪಿನಲ್ಲಿ ಸಕ್ರಿಯರಾಗಿದ್ದ 20 ಹುಡುಗರ ಹೆಸರನ್ನು ಬಂಧಿತ ಬಾಲಕನೇ ಪೊಲೀಸರಿಗೆ ತಿಳಿಸಿದ್ದಾನೆ. ಆತನ ಮೊಬೈಲ್ ಫೋನನ್ನು ದೆಹಲಿ ಪೊಲೀಸರ ಸೈಬರ್ ವಿಭಾಗ ವಶಪಡಿಸಿಕೊಂಡಿದೆ. ಪೊಲೀಸರು ವಶಕ್ಕೆ ಪಡೆದಿರುವ ಬಾಲಕ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ ವಿದ್ಯಾರ್ಥಿ. ದಕ್ಷಿಣ ದೆಹಲಿಯ ಒಟ್ಟು ನಾಲ್ಕೈದು ಶಾಲೆಗಳ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಗುಂಪಿನಲ್ಲಿದ್ದರು. (ಏಜೆನ್ಸಿ)

    ನಕಲಿ ಅಶ್ಲೀಲ ಸಿಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ: ರಾಮಚಂದ್ರಾಪುರ ಮಠಕ್ಕೆ ಗೆಲುವು

    VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts