More

    ಕಾಲಕ್ಕೆ ತಕ್ಕಂತೆ ಕ್ರಶ್‌ಗಳು; ಸಿನಿ ಅಭಿಮಾನಿಗಳ ಮನ ಗೆದ್ದಿರುವ ಕನಸಿನ ನಟಿಯರು

    ಮಾದಕ ನೋಟ, ಕಿರು ನಗೆ ಹಾಗೂ ಸೌಂದರ್ಯದಿಂದ ಸಿನಿಮಾ ನಟಿಯರು ರಾತ್ರೋರಾತ್ರಿ ಜನಪ್ರಿಯರಾಗಿ ‘ನ್ಯಾಷನಲ್ ಕ್ರಶ್’ಗಳಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿಯರ ಫಾಲೋವರ್ ಸಂಖ್ಯೆ ಹೆಚ್ಚಳವಾಗುವುದಲ್ಲದೆ ಎಲ್ಲೆಲ್ಲೂ ಅವರ ಬಗ್ಗೆಯೇ ಮಾತುಗಳು ಕೇಳಿಬರುತ್ತವೆ. ಉಡುಗೆ-ತೊಡುಗೆ, ಅಭಿನಯ ಹಾಗೂ ಹಾವ-ಭಾವಕ್ಕೆ ಅಭಿಮಾನಿಗಳು ಮನಸೋತು ಅವರನ್ನು ‘ಕನಸಿನ ಹುಡುಗಿ’ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ.

    ‘ಅನಿಮಲ್’ ನಟಿಗೆ ಸೋತ ಅಭಿಮಾನಿಗಳು
    ಸಂದೀಪ ರೆಡ್ಡಿ ವಂಗಾ ನಿರ್ದೇಶನದಲ್ಲಿ ಕಳೆದ ವರ್ಷ ತೆರೆಕಂಡ ‘ಅನಿಮಲ್’ ಬಿಗ್ ಹಿಟ್ ಕಂಡಿತ್ತು. ನಟ ರಣಬೀರ್ ಕಪೂರ್ ಅಭಿನಯದ ಈ ಚಿತ್ರದಲ್ಲಿ ತೃಪ್ತಿ ದಿಮ್ರಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಟಿಯ ಮಾದಕ ನಟನೆಗೆ ಅಭಿಮಾನಿಗಳು ಮನಸೋತಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ ಹೊಂದುವ ಮೂಲಕ ‘ನ್ಯಾಷನಲ್ ಕ್ರಶ್‌‘ ಆದರು. ಬಳಿಕ ತೃಪ್ತಿಗೆ ಆರು ಸಿನಿಮಾಗಳಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದು, ಸದ್ಯ ಬಹು ಬೇಡಿಕೆ ನಟಿಯಾಗಿದ್ದಾರೆ. ‘ಬ್ಯಾಡ್ ನ್ಯೂಸ್’ ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.

    ಕಾಲಕ್ಕೆ ತಕ್ಕಂತೆ ಕ್ರಶ್‌ಗಳು; ಸಿನಿ ಅಭಿಮಾನಿಗಳ ಮನ ಗೆದ್ದಿರುವ ಕನಸಿನ ನಟಿಯರು

    ಪ್ರತಿಭೆಯ ರಶ್ಮಿಕಾ
    ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ‘ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿ ‘ಕರ್ನಾಟಕದ ಕ್ರಶ್’ ಆಗಿದ್ದರು. ಬಳಿಕ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಸದ್ಯ ಬಹುಬೇಡಿಕೆ ನಟಿಯಾಗಿರಿವ ಜತಗೆ ‘ನ್ಯಾಷನಲ್ ಕ್ರಶ್’ ಆಗಿದ್ದಾರೆ. ್ಯಾಷನ್ ಹಾಗೂ ಪ್ರತಿಭೆಯಿಂದ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಉತ್ತಮ ನಟಿ ಫಿಲ್ಮ ೇರ್ ಪ್ರಶಸ್ತಿ ಪಡೆಯುವ ಮೂಲಕ ಹೆಚ್ಚಿನ ಜನಮನ್ನಣೆ ಗಳಿಸಿದರು. ಪ್ರಶಸ್ತಿ ಸಮಾರಂಭಕ್ಕೆ ತುಂಬಾ ್ಯಾಷನ್ ಆಗಿ ಬಂದಿದ್ದ ರಶ್ಮಿಕಾ ಅಂದಿನಿಂದ ಅಭಿಮಾನಿಗಳ ಪಾಲಿಗೆ ನ್ಯಾಷನಲ್ ಕ್ರಶ್ ಆಗಿದ್ದರು. ‘ಸಿಕಂದರ್’ ಹಾಗೂ ‘ಪುಷ್ಪ- ದ ರೂಲ್’ ಚಿತ್ರದಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.

    ಕಾಲಕ್ಕೆ ತಕ್ಕಂತೆ ಕ್ರಶ್‌ಗಳು; ಸಿನಿ ಅಭಿಮಾನಿಗಳ ಮನ ಗೆದ್ದಿರುವ ಕನಸಿನ ನಟಿಯರು

    ಮಾದಕತೆಯ ದಿಶಾ
    ‘ಲೋರ್’ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಕ್ಲಿಕ್ ಆದವರು ನಟಿ ದಿಶಾ ಪಟಾನಿ. ಬೋಲ್ಡ್ ಆ್ಯಂಡ್ ಬ್ಯೂಟಿಗೆ ಹೆಸರಾಗಿರುವ ದಿಶಾ ತಮ್ಮ ವರ್ಕೌಟ್, ಜಿಮ್ ಆ್ಯಕ್ಟಿವಿಟಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಬ್ಯೂಟಿ, ಫಿಟ್ನೆಸ್, ಸ್ಕಿನ್‌ಕೇರ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ದಿಶಾ ಪಟಾನಿ ‘ಎಂ.ಎಸ್.ಧೋನಿ- ಅನ್‌ಟೋಲ್ಡ್ ಸ್ಟೋರಿ’ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್‌ಗೆ ಜೋಡಿಯಾಗಿದ್ದರು. ಈ ಚಿತ್ರದ ನಟನೆಗೆ ಸಾಕಷ್ಟು ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

    ಕಣ್ಣೋಟದಿಂದ ಪ್ರಿಯಾ ಫೇಮಸ್
    ಮಲಯಾಳಂನ ‘ಒರು ಅದಾರ್ ಲವ್‌‘ ಸಿನಿಮಾದ ಒಂದು ಕಣ್ಣೋಟದಿಂದಾಗಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ‘ನ್ಯಾಷನಲ್ ಕ್ರಶ್’ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಕಣ್ಣೋಟದ ವಿಡಿಯೋ ಹೆಚ್ಚಿನ ವೀಕ್ಷಣೆ ಪಡೆಯುವುದಲ್ಲದೇ ಟ್ರೆಂಡ್ ಸೆಟ್ ಮಾಡಿತ್ತು. ಸದ್ಯ ಪ್ರಿಯಾಗೆ ಸಾಮಾಜಿಕ ಜಾಲತಾಣದಲ್ಲಿ 76 ಲಕ್ಷ ಾಲೋವರ್ ಹೊಂದಿದ್ದಾರೆ. ಈ ಕಣ್ಣೋಟದಿಂದ ನಟಿಗೆ ಹಲವಾರು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ಕನ್ನಡದ ‘ವಿಷ್ಣುಪ್ರಿಯಾ’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

    ಮನಸ್ಸು ಗೆದ್ದಿದ್ದ ಮಾನುಷಿ
    ನಟಿ, ಮಾಡಲ್ ಮಾನುಷಿ ಛಿಲ್ಲರ್ 2017ರ ಮಿಸ್. ಇಂಡಿಯಾ ಹಾಗೂ ಮಿಸ್. ವರ್ಲ್ಡ್ ಗೆಲ್ಲುವ ಮೂಲಕ ಮಾಡಲಿಂಗ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರು. ಇವರ ಮಾತು ಹಾಗೂ ್ಯಾಷನ್‌ಗೆ ಅಭಿಮಾನಿಗಳು ಮೋಡಿಯಾಗಿದ್ದರು. ಬಳಿಕ ಇವರು ಕೂಡ ‘ನ್ಯಾಷನಲ್ ಕ್ರಶ್’ ಆಗಿ ಮಾರ್ಪಟ್ಟಿದ್ದರು. ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್‌‘ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಯಾಗಿದ್ದರು.

    ಇವರು ಕೂಡ ಕ್ರಶ್‌ಗಳು
    ಬಣ್ಣದ ಲೋಕದಲ್ಲಿ ದಿನಕ್ಕೆ ಒಬ್ಬರು ‘ನ್ಯಾಷನಲ್ ಕ್ರಶ್’ಗಳು ಉದಯಿಸುತ್ತಾರೆ. ಶ್ರೀದೇವಿ, ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್ ಕೂಡ ಇಂದಿಗೂ ಸಿನಿ ರಸಿಕರ ಪಾಲಿಗೆ ಕ್ರಶ್‌ಗಳೇ. ಅಷ್ಟೇ ಅಲ್ಲದೇ ‘ದಿಲ್ ಬೆಚಾರ’ ನಟಿ ಸಂಜನಾ ಸಂ, ತಾರಾ ಸುತಾರಿಯಾ, ಶ್ರೀಲೀಲಾ, ಜಾಹ್ನವಿ ಕಪೂರ್, ತಮನ್ನಾ ಭಾಟಿಯಾ ಅಭಿಮಾನಿಗಳ ಪಾಲಿಗೆ ಇಂದಿಗೂ ‘ಕ್ರಶ್‌‘ಗಳೇ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts