More

    ಹಿಂದುಗಳಲ್ಲಿ ಭೀತಿಯ ವಾತಾವರಣ ಸೃಷ್ಟಿ: ಜನಜಾಗೃತಿ ಆಂದೋಲನದಲ್ಲಿ ಶ್ರೀಕಾಂತ ಶೆಟ್ಟಿ ಕಾರ್ಕಳ ಆಕ್ರೋಶ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ
    ಬೋಳಿಯಾರ್ ಎಂದ ಕೂಡಲೇ ಅಲ್ಲಿನ ಹಿಂದುಗಳು ಭಯಭೀತರಾಗಿದ್ದು, ರಸ್ತೆಯನ್ನೇ ಬದಲಿಸಿ ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಹಿಂಜಾವೇ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

    ಬೋಳಿಯಾರ್‌ನಲ್ಲಿ ನಡೆದ ಘಟನೆ ಖಂಡಿಸಿ ಹಿಂದು ಜನಜಾಗೃತಿ ಸಮಿತಿಯಿಂದ ಮಂಗಳವಾರ ಅಸೈಗೋಳಿಯಲ್ಲಿ ಆಯೋಜಿಸಲಾಗಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿದರು.

    ಭಯಾನಕ ಸಂಘಟನೆಯಾಗಿ ಬೆಳೆಯುತ್ತಿದೆ

    ಈಗಾಗಲೇ ಈ ದೇಶದ ಅನೇಕ ಭೂಭಾಗಗಳು ನಮ್ಮ ಕೈತಪ್ಪಿ ಹೋಗಿವೆ. 1906ರಲ್ಲಿ ಮುಸ್ಲಿಂಲೀಗ್ ಆರಂಭಗೊಂಡಿದ್ದು, 1947ರಲ್ಲಿ ಭಾರತವನ್ನು ವಿಭಜನೆ ಮಾಡಿದರು. 2006ರಲ್ಲಿ ದಕ್ಷಿಣದಲ್ಲಿ ಪಿಎಫ್‌ಐ ಆರಂಭಗೊಂಡು 2047ರಲ್ಲಿ ದಕ್ಷಿಣದಲ್ಲಿ ವಿಭಜನೆ ಮಾಡಲು ಹೊರಟಿದ್ದರು. ಆದರೆ ಕೇಂದ್ರ ಸರ್ಕಾರ ಆ ಸಂಘಟನೆಯನ್ನು ನಿಷೇಧಿಸಿತು. ಪಿಎಫ್‌ಐ ಅಂಗಸಂಸ್ಥೆ ಎಸ್‌ಡಿಪಿಐ ಕಾಂಗ್ರೆಸ್ ಜತೆ ವಿಲೀನವಾಗಿ ಮುಸ್ಲಿಂ ಲೀಗ್‌ಗಿಂತಲೂ ಭಯಾನಕ ಸಂಘಟನೆಯಾಗಿ ಬೆಳೆಯುತ್ತಿದೆ ಎಂದರು.

    ಎಸ್‌ಡಿಪಿಐನಿಂದ ಚೂರಿ, ಕಾಂಗ್ರೆಸ್‌ನಿಂದ ಕೇಸು

    ಭಾರತ್ ಮಾತಾಕೀ ಜೈ ಎಂದರೆ ಎಸ್‌ಡಿಪಿಐನವರು ಚೂರಿ ಹಾಕಿದರೆ, ಕಾಂಗ್ರೆಸ್‌ನವರು ಕೇಸು ಹಾಕಿಸುತ್ತಾರೆ. ಎರಡು ರೀತಿಯ ದಾಳಿಯನ್ನು ಹಿಂದು ಸಮಾಜ ಎದುರಿಸುತ್ತಿದೆ. ಅವರಿಗೆ ಮತ ಹಾಕಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದವರು ನಾವೇ ಮೂರ್ಖ ಹಿಂದುಗಳು. ನಮಗೆ ಪೆಟ್ರೋಲ್, ಆಲೂಗಡ್ಡೆ, ಟೊಮ್ಯಾಟೊ ಬೆಲೆಯ ಬಗ್ಗೆ ಚಿಂತೆಯಿದೆ. ಎಲ್ಲ ರೀತಿಯ ಗ್ಯಾರಂಟಿ ಕೊಟ್ಟಿರುವ ಸರ್ಕಾರ, ಮನೆಯಿಂದ ಹೊರಹೋದ ಮಕ್ಕಳ ಬಗ್ಗೆ ಗ್ಯಾರಂಟಿ ಕೊಟ್ಟಿಲ್ಲ ಎನ್ನುವುದು ಬೋಳಿಯಾರ್ ಘಟನೆ ಸಾಬೀತುಪಡಿಸಿದೆ ಎಂದು ಟೀಕಿಸಿದರು.

    ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಟಿ.ಜಿ.ರಾಜಾರಾಮ್ ಭಟ್, ನರಸಿಂಹ ಶೆಟ್ಟಿ ಮಾಣಿ, ಗುರುಪ್ರಸಾದ್ ಉಳ್ಳಾಲ, ರವಿ ಅಸೈಗೋಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts