More

    ಕರೊನಾ ಸಂಕಷ್ಟ ವಿವರಿಸಿದ್ದಾರೆ ಫಿಲಿಪೈನ್ಸ್​ನಲ್ಲಿರುವ ಕರುನಾಡ ಕುವರಿಯರು..

    ಚಾಮರಾಜನಗರ: ಕರೊನಾ ವೈರಸ್​ Covid19 ಸೋಂಕು ಹರಡದಂತೆ ತಡೆಯಲು ಕರ್ನಾಟಕದಲ್ಲಿ ಸರ್ಕಾರ ಒಂದು ವಾರ ಸಾರ್ವಜನಿಕ ಚಟುವಟಿಕೆಗಳನ್ನು ಬಂದ್ ಮಾಡಿದಂತೆ ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಹಲವು ದೇಶಗಳಲ್ಲಿ ವಿದೇಶೀಯರಿಗೆ ತವರಿಗೆ ಮರಳುವುದಕ್ಕೆ ಗಡುವನ್ನೂ ವಿಧಿಸಲಾಗಿದೆ. ಫಿಲಿಪೈನ್ಸ್​ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದು, ತವರಿಗೆ ಮರಳಲು ವಿದೇಶಿಯರಿಗೆ 72 ಗಂಟೆಗಳ ಗಡುವನ್ನು ಅಲ್ಲಿನ ಸರ್ಕಾರ ನೀಡಿದೆ. ಈ ಗಡುವಿನ ಸಮಯ ಮೀರುತ್ತಿರುವ ಕಾರಣ ಗಾಬರಿಗೊಳಗಾಗಿದ್ದಾರೆ ಭಾರತೀಯರು. ಮನಕಲಕುವ ಸನ್ನಿವೇಶವನ್ನು ಕರ್ನಾಟಕದಿಂದ ಕಲಿಕೆಗಾಗಿ ಅಲ್ಲಿಗೆ ತೆರಳಿರುವ ವಿದ್ಯಾರ್ಥಿನಿಯರಿಬ್ಬರು ವಿಡಿಯೋ ಮೂಲಕ ವಿವರಿಸಿ ನೆರವಿಗಾಗಿ ಸರ್ಕಾರದ ಮೊರೆ ಹೋಗಿದ್ದಾರೆ.

    ವಿಡಿಯೋದಲ್ಲಿರುವ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರು ಕೊಳ್ಳೇಗಾಲದ ರಶ್ಮಿ, ಇನ್ನೊಬ್ಬರು ಬೆಂಗಳೂರಿನ ಸಹನಾ. ಫಿಲಿಫೈನ್ಸ್ ದೇಶದಲ್ಲಿ ಕಳೆದ ೨ ವರ್ಷಗಳಿಂದ ಮೆಡಿಸನ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರು ಇವರು. ಅವರು ಹೇಳಿದ ವಿವರ ಇದು-

    ಫಿಲಿಫೈನ್ಸ್ ದೇಶದಲ್ಲಿ ೧೮೦ಕ್ಕೂ ಹೆಚ್ಚು ಮಂದಿ ಕರೊನಾ ಸೋಂಕಿತರಿದ್ದಾರೆ. ನಮ್ಮನ್ನ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಅನ್ನಾಹಾರಕ್ಕೂ ತತ್ವಾರ ಬಂದಿದೆ. ಹೊರಗೆ ಕಾಲಿಡುವುದಕ್ಕೂ ಬಿಡುತ್ತಿಲ್ಲ. ಮಾಲ್​ಗಳೂ ಓಪನ್ ಇಲ್ಲ. ಇದಕ್ಕಿಂತ ಜೈಲು ವಾಸವೇ ಉತ್ತಮ. ಫಿಲಿಪೈನ್ಸ್ ಈಗ ಲಾಕ್​ಡೌನ್ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದರೆ ಮುಂದುವರಿಸುವ ಸೂಚನೆಯನ್ನೂ ಕೊಟ್ಟಿದೆ. 72 ಗಂಟೆಗಳ ಕಾಲ ಅವಕಾಶ ಕೊಟ್ಟಿತ್ತು. ವಿಮಾನದ ಟಿಕೆಟ್ ಬುಕ್ ಮಾಡಿದ್ದೆವು. ಆದರೆ, ಭಾರತ ಸರ್ಕಾರ ವಿಮಾನ ಹಾರಾಟಕ್ಕೆ ಗಡುವು ವಿಧಿಸಿದ್ದು ನಮಗೆ ಕಂಟಕವಾಗಿದೆ. ಭಾರತದ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳಿದ್ದೇವೆ ಇಲ್ಲಿ. ಎಲ್ಲರನ್ನೂ ವಾಪಸ್ ಕರೆಯಿಸಿಕೊಳ್ಳಿ ಎಂದು ರಶ್ಮಿ ಮತ್ತು ಸಹನಾ ಅಳಲು ತೋಡಿಕೊಂಡಿದ್ದಾರೆ.

    ಕರ್ನಾಟಕ ಬಂದ್​ ಮುಂದುವರಿಕೆಗೆ ಸರ್ಕಾರದ ಒಲವು: ಮುಂಜಾಗ್ರತಾ ಕ್ರಮ ಬಿಗಿ ಕುರಿತ ನಿರ್ಣಯ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts