More

    ಕರೊನಾ ಲಾಕ್​ಡೌನ್​ನಿಂದ ರಾಷ್ಟ್ರಕ್ಕೆ ಎಷ್ಟು ಹೊರೆಯಾಗಲಿದೆ? ಪರಿಣಿತರ ಸಲಹೆ ಏನು?

    ನವದೆಹಲಿ: ದೇಶಕ್ಕೆ ವಕ್ಕರಿಸಿರುವ ಮಹಾಮಾರಿ ಕರೊನಾ ವೈರಸ್​ ಸೋಂಕಿನಿಂದ ಇಡೀ ರಾಷ್ಟ್ರಕ್ಕೆ ಬೀಗಮುದ್ರೆ ಬಿದ್ದಿದೆ. ಆರ್ಥಿಕ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿದ್ದು, ಲಾಕ್​ಡೌನ್​ನಿಂದಾಗಿ ದೇಶಕ್ಕೆ ಸುಮಾರು 9 ಲಕ್ಷ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ. ಅಲ್ಲದೆ, ಜಿಡಿಪಿ ಬೆಳವಣಿಗೆ ದರ 4ಕ್ಕೆ ಕುಸಿಯಲಿದೆ ಎಂದು ಪರಿಣಿತರು ಅಂದಾಜಿಸಿದ್ದು, ಸದ್ಯ ಆರ್ಥಿಕ ಪ್ಯಾಕೇಜ್​ ಅವಶ್ಯಕತೆ ಇದೆ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಭಾರತೀಯ ರಿಸರ್ವ್​ ಬ್ಯಾಂಕ್​ ಏಪ್ರಿಲ್ 3 ರಂದು ತನ್ನ ಮೊದಲ ದ್ವಿ-ಮಾಸಿಕ ನೀತಿ ಪರಿಶೀಲನೆಯನ್ನು ಪ್ರಕಟಿಸಲಿದ್ದು, ಭಾರಿ ದರ ಕಡಿತ ಮಾಡಲು ಸಜ್ಜಾಗಿದೆ ಮತ್ತು ಹಣಕಾಸಿನ ಕೊರತೆಯ ಗುರಿಗಳನ್ನು ಉಲ್ಲಂಘಿಸಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಮೂರು ವಾರಗಳ ಸಂಪೂರ್ಣ ಲಾಕ್​ಡೌನ್​ ಅನ್ನು ಘೋಷಿಸಿದ್ದಾರೆ. ಕರೊನಾ ವೈರಸ್​ ವೇಗವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮ ಈಕ್ವಿಟಿ ಮಾರುಕಟ್ಟೆಗಳು ಬುಧವಾರದ ವಹಿವಾಟಿನ ಆರಂಭದಲ್ಲಿಯೇ ಶೇ 0.47 ರಷ್ಟು ಕುಸಿದವು.

    ಏಪ್ರಿಲ್ ಪರಿಶೀಲನೆಯಲ್ಲಿ ಆರ್‌ಬಿಐ ಶೇಕಡಾ 0.65 ರಷ್ಟು ದರ ಕಡಿತಗೊಳಿಸುವ ಸಾಧ್ಯತೆಯಿದೆ ಮತ್ತು ವರ್ಷದ ಅವಧಿಯಲ್ಲಿ ಬಡ್ಡಿದರಗಳನ್ನು ಶೇಕಡಾ 1 ರಷ್ಟು ಕಡಿತಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ.

    ಲಾಕ್​​ಡೌನ್​ನಿಂದ ಉಂಟಾಗುವ ಆರ್ಥಿಕ ಪರಿಣಾಮದ ಬಗ್ಗೆ ಭಾರತ ಸರ್ಕಾರವು ಇಲ್ಲಿಯವರೆಗೆ ಮೌನವಾಗಿದೆ. ದಾಳಿಯನ್ನು ಅನ್ನು ತಗ್ಗಿಸಲು ಯಾವುದಾದರೂ ಕ್ರಮಗಳನ್ನು ತೆಗದುಕೊಳ್ಳಿ ಎಂದು ಪರಿಣಿತರ ಸಲಹೆ ನೀಡಿದ್ದಾರೆ.

    ಈಗಾಗಲೇ ನೋಟ್​ ಬ್ಯಾನ್​ ಹಾಗೂ ಜಿಎಸ್​ಟಿಯಂತಹ ಕ್ರಮಗಳಿಂದ ಅಸಂಘಟಿತ ವಲಯಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಕೊರನಾ ಪರಿಣಾಮದಿಂದ ಮತ್ತಷ್ಟು ಹೊಡೆತ ಬೀಳಲಿದೆ. ಹೀಗಾಗಿ ಸಣ್ಣ ಉದ್ಯಮಗಳಿಗೆ ಸುಲಭ ಸಾಲ, ಸಾಲ ಪುನರ್ರಚನೆ ಮತ್ತು ನಗದು ವರ್ಗಾವಣೆ ಸೇರಿ ಸಾಧ್ಯವಾಗುವಂತಹ ಕ್ರಮಗಳನ್ನು ಕರೊನಾ ಆರ್ಥಿಕ ಪ್ಯಾಕೇಜ್​ ಅಡಿಯಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ಕರೊನಾ ಗಂಭೀರತೆ ಅರ್ಥ ಮಾಡಿಕೊಂಡಿದ್ದಾರೆ, ಸೋಷಿಯಲ್​ ಡಿಸ್ಟನ್ಸ್​ ಪಾಲನೆ ಮಾಡ್ತಿದ್ದಾರೆ…ಹೀಗಿದ್ದಾಗ ನಾವು-ನೀವು?

    ರಾಜಮೌಳಿಯ ಬಹುನೀರಿಕ್ಷಿತ ‘ಆರ್​ಆರ್​ಆರ್​’ ಚಿತ್ರದ ಹೆಸರಿನ ಅರ್ಥವೇನು: ಮೋಷನ್ ಪೋಸ್ಟರ್​ನಲ್ಲಿದೆ ಉತ್ತರ!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts