More

    VIDEO: ಕರೋನಾ ವೈರಸ್ ಸೋಂಕಿಗೆ ಔಷಧ ಅಭಿವೃದ್ಧಿಪಡಿಸಲು ಬರೋಬ್ಬರಿ ಎರಡು ವರ್ಷ ಬೇಕಾದೀತು ಎಂದ ಆರೋಗ್ಯ ಸಚಿವಾಲಯ

    ನವದೆಹಲಿ: ಕರೋನಾ ವೈರಸ್​ ಸೋಂಕು ಪೀಡಿತರ ಸಂಖ್ಯೆ ದೇಶದಲ್ಲಿ 73ಕ್ಕೆ ಏರಿಕೆಯಾಗಿದ್ದು, ಇವರ ಸಂಪರ್ಕಕ್ಕೆ ಬಂದಿರುವ 1,500ಕ್ಕೂ ಹೆಚ್ಚು ಜನರನ್ನು ನಿಗಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

    ಆರೋಗ್ಯ ಸಚಿವಾಲಯದ ಅಧಿಕಾರಿಗಳು Covid19 ಸೋಂಕಿನ ಕುರಿತು ಇದೇ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದು, ಅನೇಕ ಮಾರ್ಗದರ್ಶಿ ಸೂತ್ರಗಳನ್ನು ವಿವರಿಸಿದ್ದಾರೆ. ಅಲ್ಲದೆ, ಪತ್ರಕರ್ತರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಸೋಂಕು ಸದ್ಯ ಕೇವಲ ಕುಟುಂಬದವರ ಮಟ್ಟದಲ್ಲಿ ಹರಡುತ್ತಿದೆ. ಸಮುದಾಯದ ಮಟ್ಟದಲ್ಲಿ ಹರಡುವುದಕ್ಕೆ ಪ್ರಾರಂಭವಾಗಿಲ್ಲ. ಹೀಗಾಗಿ ಆರಂಭದಲ್ಲೇ ಅದನ್ನು ತಡೆಯುವುದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ತೆಗದುಕೊಂಡಿದೆ. ಕರೋನಾ ವೈರಸ್​ ಅನ್ನು ಪ್ರತ್ಯೇಕಿಸುವ ಹನ್ನೊಂದು ಪ್ರಕರಣ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

    Covid-19 ವೈರಸ್​ ಸೋಂಕು ತಡೆಗಟ್ಟುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತಿದೆ. ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಭಾರತದಲ್ಲಿ ದಾಖಲಾಗಿರುವ ಕೇಸ್​ಗಳೆಲ್ಲವೂ ಹೊರಗಿನಿಂದ ಬಂದಿರುವಂಥದ್ದು. ಹೀಗಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಲಾಗುತ್ತಿದೆ. ಸರ್ಕಾರ ಮಾರ್ಚ್​ 4 ರಿಂದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡುತ್ತಿದ್ದರೂ, ಅದಕ್ಕೂ ಮೊದಲು ಭಾರತಕ್ಕೆ ಬಂದಿರುವವರ ಬಗ್ಗೆ ಸ್ಥಳೀಯ ಮಟ್ಟದಲ್ಲಿ ನಿಗಾವಹಿಸಲು ಸೂಚಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯದ ಮಟ್ಟಿಗೆ ಈ ವೈರಸ್​ ಸೋಂಕಿಗೆ ಸರಿಯಾದ ಪರಿಣಾಮಕಾರಿ ಔಷಧವನ್ನು ಅಭಿವೃದ್ಧಿ ಪಡಿಸಲಾಗಿಲ್ಲ. ಇದಕ್ಕೆ ಔಷಧ ಅಭಿವೃದ್ಧಿ ಪಡಿಸುವುದಕ್ಕೆ ಏನಿಲ್ಲ ಎಂದರೂ ಒಂದೂವರೆಯಿಂದ ಎರಡು ವರ್ಷದ ತನಕ ಸಮಯ ಬೇಕಾದೀತು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts