More

    ಕಲಬುರಗಿಯಲ್ಲಿ ಕರೋನಾ ಎಫೆಕ್ಟ್​: ಪೆಟ್ರೋಲ್​ಗಾಗಿ ರಾತ್ರೋರಾತ್ರಿ ಕ್ಯೂ ನಿಂತ ಜನ, ವೈದ್ಯನ ಮನೆಯ 7 ಸದಸ್ಯರು ಸೇರಿ 450 ಜನರಿಗೆ ಹೋಮ್ ಐಸೋಲೇಷನ್

    ಕಲಬುರಗಿ: ಜಿಲ್ಲೆಯಲ್ಲಿ ಕರೊನಾ ವೈರಸ್ Covid19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲಾಡಳಿತ ಹೆಚ್ಚಿನ ನಿಗಾವಹಿಸಿದೆ. ಈ ನಡುವೆ, ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ತಗುಲಿದ ಕಾರಣ ಅವರ ಮನೆಯ ಏಳು ಸದಸ್ಯರನ್ನು ಈಗ ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಇದಲ್ಲದೆ, ವೈದ್ಯರ ಜತೆ ನೇರ ಸಂಪರ್ಕ ಹೊಂದಿದ್ದ 50 ಜನರ ಮೇಲೆ ಕೂಡ ನಿಗಾ ಇರಿಸಲಾಗಿದೆ. ಈ 50 ಜನರಿಗೂ ಹೋಮ್ ಐಸೋಲೇಷನ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್​ಗೆ ಒಳಗಾದವರ ಸಂಖ್ಯೆ 450 ತಲುಪಿದೆ. ಇವರೆಲ್ಲರಿಗೂ ಮುಂದಿನ 14 ದಿನಗಳ ಕಾಲ ಮನೆಯಿಂದ ಹೊರಬಾರದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ, ವೈದ್ಯನ ಜತೆ ಸಂಪರ್ಕದಲ್ಲಿದ್ದ ಮತ್ತಷ್ಟು ಜನರನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತ ಮುಂದುವರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯನ ಮನೆ, ಮೃತ ವೃದ್ಧನ ಮಗಳ ಮನೆಯ ಸುತ್ತಲೂ ಬ್ಯಾರಿಕೇಡ್ ಅಳವಡಿಸಿದ್ದು ಅಲ್ಲಿ ಯಾರೂ ಸುಳಿದಾಡದಂತೆ ಪೊಲೀಸ್ ಬಂದೋಬಸ್ತ್ ಅನ್ನು ಜಿಲ್ಲಾಡಳಿತ ಒದಗಿಸಿದೆ.

    ಈ ನಡುವೆ, ಕಲಬುರಗಿಯಲ್ಲಿ ಕರೊನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಗಳನ್ನು ಇಂದಿನಿಂದ ಬಂದ್ ಮಾಡಲಾಗುತ್ತಿದೆ ಎಂದು ನಿನ್ನೆಯೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯ ವದಂತಿ ಹರಡಿಸಿದ್ದಾರೆ. ಇದರಿಂದಾಗಿ ಗಾಬರಿಗೊಂಡ ಬೈಕ್ ಸವಾರರು, ಕಾರಿನವರು ಒಮ್ಮೆಲೆ ಬಂಕ್ ಗಳತ್ತ ಧಾವಿಸಿದರು. ಕಳೆದ ರಾತ್ರಿಯೂ ಇದೇ ಪರಿಸ್ಥಿತಿ ಕಂಡಿತ್ತು. ಬೆಳ್ಳಂಬೆಳಗ್ಗೆಯೂ ವಾಹನಗಳು ಬಂಕ್ ತುಂಬಿದ್ದವು. ಇದರಿಂದಾಗಿ ನಗರದ ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳು ರಶ್ ಆದವು. ಹೀಗೆ ಬಂದವರು ಸರದಿಯಲ್ಲಿ ನಿಂತು ವಾಹನಗಳಿಗೆ ಇಂಧನ ಹಾಕಿಸಿಕೊಂಡರು. ಆದರೆ, ಬಂಕ್ ಬಂದ್ ಆಗಲ್ಲ ಚಾಲೂ ಇರುತ್ತದೆ ಎಂದು ಬಂಕ್ ನವರು ಹೇಳಿದ ನಂತರ ಕೆಲವರು ವಾಪಸು ಹೋಗುತ್ತಿದ್ದಾರೆ. ಇದು ಕೇಳಿ ವಾಹನದವರು ನಿರುಮ್ಮಳಗೊಂಡರು. ಈ ಮೊದಲೇ ಜಿಲ್ಲಾಧಿಕಾರಿಗಳು ಎಲ್ಲ ಅಗತ್ಯ ಸೇವೆ ಲಭ್ಯವಿರಲಿವೆ ಎಂದು ಹೇಳಿದ್ದರು.

    ಕರೊನಾದಿಂದಾಗಿ ಗೋಮೂತ್ರ, ಸಗಣಿಗೂ ಬಂತು ಬೆಲೆ; 1 ಲೀಟರ್​ ಗೋಮೂತ್ರಕ್ಕೆ 500 ರೂ. 1 ಕೆ.ಜಿ ಸಗಣಿಗೆ 500 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts