More

    ಎಂಎಸ್​ಎಂಇ ಬಲವರ್ಧನೆಗೆ ಸಹಕಾರ: ಎಫ್​​​ಕೆಸಿಸಿಐ ಅಧ್ಯಕ್ಷ ರಮೇಶ್​ಚಂದ್ರ ಲಹೋಟಿ ಹೇಳಿಕೆ

    ಬೆಂಗಳೂರು: ಆರ್ಥಿಕ ಬೆಳವಣಿಗೆ, ನಾವೀನ್ಯತೆಗೆ ಉತ್ತೇಜನ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್​ಎಂಇ) ಕಾರ್ಯವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​​​​ಕೆಸಿಸಿಐ) ಅಧ್ಯ ರಮೇಶ್​ಚಂದ್ರ ಲಹೋಟಿ ಶ್ಲಾಘಿಸಿದ್ದಾರೆ.

    ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಮುನ್ನಡೆಸುವಲ್ಲಿ ಎಂಎಸ್​ಎಂಇ ಪ್ರಮುಖ ಪಾತ್ರ ವಹಿಸುತ್ತಿದೆ. ಸಣ್ಣ ಕೈಗಾರಿಕೆಗಳು ಕೈಗೊಳ್ಳುವ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ಇರಲಿದೆ. “ಅಂತಾರಾಷ್ಟ್ರೀಯ ಎಂಎಸ್​ಎಂಇ ದಿನ’ವು ನೀತಿ ನಿರೂಪಕರು, ಬೃಹತ್​ ಉದ್ಯಮಗಳು, ಹಣಕಾಸು ಸಂಸ್ಥೆಗಳು, ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಗ್ಗೂಡಲು, ಚರ್ಚಿಸಲು ಮತ್ತು ಎಂಎಸ್​ಎಂಇಗಳಿಗೆ ಅನುಕೂಲಕರ ವಾತಾವರಣ ಬೆಳೆಸುವ ವಿಚಾರ ವಿನಿಮಯ ಮಾಡಿಕೊಳ್ಳಲು ವಿಶಿಷ್ಟ ವೇದಿಕೆಯಾಗಿದೆ. ಈ ದಿನವು ಬಡತನ ನಿಮೂರ್ಲನೆ, ಆರ್ಥಿಕ ಬೆಳವಣಿಗೆ ಉತ್ತೇಜಿಸುವಲ್ಲಿ ಸಾಮೂಹಿಕ ಪ್ರಯತ್ನ ಕುರಿತು ಎತ್ತಿ ತೋರಿಸುತ್ತದೆ ಎಂದರು.

    ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು; ಚೆಲುವರಾಯಸ್ವಾಮಿ ರಿಯಾಕ್ಷನ್​
    ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಭಿವೃದ್ಧಿಗೆ ಕೌಶಲ, ಜ್ಷಾನದೊಂದಿಗೆ ಸಣ್ಣ ಕೈಗಾರಿಗಳನ್ನು ಸಜ್ಜುಗೊಳಿಸಬೇಕಿದೆ. ಸುಲಭವಾಗಿ ಆರ್ಥಿಕ ಸಹಾಯಕ್ಕೆ ಸಂಸ್ಥೆಗಳು ನಿಕಟವಾಗಿ ಕೆಲಸ ಮಾಡಬೇಕಿದೆ. ಬೃಹತ್​ ಉದ್ಯಮಗಳ ನಡುವೆ ಸಂಪರ್ಕ ಸಾಧಿಸಲು, ಜಾಗತಿಕ ಮೌಲ್ಯದ ಸರಪಳಿಗಳಲ್ಲಿ ಏಕೀಕರಣ ಉತ್ತೇಜಿಸಲು ಮತ್ತು ಮಾರುಕಟ್ಟೆ ಅವಕಾಶ ಹೆಚ್ಚಿಸಲು ಉಪಕ್ರಮಗಳನ್ನು ಬಲಪಡಿಸಲಾಗುವುದು. ನಮ್ಮೊಂದಿಗೆ ಸೇರಲು ಎಲ್ಲ ಪಾಲುದಾರರನ್ನು ಆಹ್ವಾನಿಸಲಾಗುವುದು ಎಂದು ಲಹೋಟಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts