More

    ಸೂರ್ಯ​ ಹಿಡಿದ ಕ್ಯಾಚ್​ ಬಗ್ಗೆ ಪ್ರಶ್ನಿಸಿದ ಪಾಕ್​ ವರದಿಗಾರ: ದ. ಆಫ್ರಿಕಾ ದಿಗ್ಗಜ ಶಾನ್ ಪೊಲಾಕ್ ಕೊಟ್ಟ ಉತ್ತರ ವೈರಲ್​

    ನವದೆಹಲಿ: ಟೀಮ್​ ಇಂಡಿಯಾ ವಿಶ್ವಕಪ್ ಗೆದ್ದಾಗಿನಿಂದ ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಆ ಒಂದು ವಿಡಿಯೋ ವೈರಲ್ ಆಗಿರುವುದು. ಆ ವಿಡಿಯೋ ಯಾವುದು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ.

    ಟಿ20 ವಿಶ್ವಕಪ್​ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಚೆಂಡನ್ನು ಆಫ್ರಿಕಾದ ಸ್ಟಾರ್​ ಆಟಗಾರ ಡೇವಿಡ್ ಮಿಲ್ಲರ್ ಬಲವಾಗಿ ಹೊಡೆದರು. ಚೆಂಡು ಗಾಳಿಯಲ್ಲಿ ಹಾರಿ ಹೋಗಿದ್ದನ್ನು ನೋಡಿ ಬಹುತೇಕರು ಅದು ಸಿಕ್ಸರ್​ ಆಗುತ್ತದೆ ಎಂದು ಭಾವಿಸಿದ್ದರು. ಆದರೆ, ಸೂರ್ಯಕುಮಾರ್​ ಯಾದವ್​ ಅವರು ಸೂಪರ್​ ಮ್ಯಾನ್​ನಂತೆ ಅದ್ಭುತವಾಗಿ ಕ್ಯಾಚ್​ ಹಿಡಿಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಅಲ್ಲಿಯವರೆಗೆ ಆಫ್ರಿಕಾ ಕಡೆ ವಾಲಿದ್ದ ವಿಜಯಲಕ್ಷ್ಮೀ ಒಂದೇ ಒಂದು ಕ್ಯಾಚ್​ನಿಂದ ಟೀಮ್​ ಇಂಡಿಯಾ ಕಡೆ ವಾಲಿದಳು. ಒಂದು ವೇಳೆ ಸೂರ್ಯ ಈ ಕ್ಯಾಚ್ ಬಿಟ್ಟಿದ್ದರೆ, ಟೀಮ್​ ಇಂಡಿಯಾ ವಿಶ್ವಕಪ್ ಗೆಲ್ಲುತ್ತಿರಲಿಲ್ಲ.

    ಆದರೆ, ಸೂರ್ಯಕುಮಾರ್​ ಯಾದವ್​ ಹಿಡಿದ ಅತ್ಯಾಕರ್ಷಕ ಕ್ಯಾಚ್ ಭಾರಿ ವಿವಾದವನ್ನೇ ಹುಟ್ಟು ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ್ದೇ ಚರ್ಚೆಯಾಗಿದೆ. ಕ್ಯಾಚ್​ ಹಿಡಿಯುವಾಗ ಸೂರ್ಯ ಅವರ ಕಾಲು ಬೌಂಡರಿ ಗೆರೆಯನ್ನು ಮುಟ್ಟಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಇದೊಂದು ಅದ್ಭುತ ಕ್ಯಾಚ್ ಎನ್ನುತ್ತಿದ್ದಾರೆ. ಇದೀಗ ಈ ವಿವಾದಾತ್ಮಕ ಕ್ಯಾಚ್ ಬಗ್ಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಶಾನ್ ಪೊಲಾಕ್ ಪ್ರತಿಕ್ರಿಯಿಸಿದ್ದಾರೆ.

    ಕಳೆದ ಎರಡು ದಿನಗಳಿಂದ ಸೂರ್ಯಕುಮಾರ್ ಅವರ ಅದ್ಭುತ ಕ್ಯಾಚ್ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕ್ಯಾಚ್‌ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ. ಸೂರ್ಯಕುಮಾರ್ ಆ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿದರು. ಆತ ಬೌಂಡರಿ ರೇಖೆಯನ್ನು ಮುಟ್ಟಲಿಲ್ಲ. ಬದಲಾಗಿ ಸೂರ್ಯಕುಮಾರ್​ ಆ ಕ್ಯಾಚ್​ ಅನ್ನು ಸೊಗಸಾಗಿ ಹಿಡಿದರು. ಪ್ರತಿಯೊಬ್ಬರೂ ಈ ಕೌಶಲ್ಯಗಳನ್ನು ಹೊಂದಿರುವುದಿಲ್ಲ. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಶಾನ್​​ ಪೊಲಾಕ್ ಹೇಳಿದ್ದಾರೆ.

    ಅದು ಕೂಡ ಈ ಪ್ರಶ್ನೆಯನ್ನು ಪಾಕಿಸ್ತಾನದ ವರದಿಗಾರನೊಬ್ಬ ಕೇಳಿದ್ದು ಇಲ್ಲಿ ಗಮನಾರ್ಹ ಸಂಗತಿ. ಬೇಕಂತಲೇ ಆತ ಪೊಲಾಕ್​ ಅವರನ್ನು ಈ ಪ್ರಶ್ನೆಯನ್ನು ಕೇಳಿದ್ದಾನೆ. ಅದಕ್ಕೆ ಪೊಲಾಕ್​ ಕೊಟ್ಟ ಉತ್ತರ ಮಾತ್ರ ಖಡಕ್​ ಆಗಿತ್ತು. ಇದೀಗ ಟೀಮ್​ ಇಂಡಿಯಾ ಅಭಿಮಾನಿಗಳು ಈ ವಿಡಿಯೋ ಮೂಲಕ ಪಾಕಿಸ್ತಾನದ ಕ್ರೀಡಾಭಿಮಾನಿಗಳ ಕಾಲೆಳೆಯುತ್ತಿದ್ದಾರೆ. ಪಾಕಿಗಳು ಟೀಮ್​ ಇಂಡಿಯಾದ ಗೆಲುವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಈ ಒಂದು ವಿಡಿಯೋ ಸಾಕ್ಷಿ ಎಂದು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​)

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ರೋಹಿತ್ ಶರ್ಮರ ವಿಭಿನ್ನ ಸಂಭ್ರಮಾಚರಣೆ ಹಿಂದಿನ ಅರ್ಥವೇನು?​ ಕಪ್ ಗೆದ್ದ ನಂತ್ರ ಯಾಕೆ ಹೀಗೆ ಮಾಡಿದ್ರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts