More

    ಸೊಳ್ಳೆ ನಿಯಂತ್ರಿಸಿ, ಕಾಯಿಲೆ ತಡೆಗಟ್ಟಿ

    ಕಲಘಟಗಿ: ಜಂಜಾಟದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ನಿರ್ಲಕ್ಷೃ ವಹಿಸದೆ ಸೂಕ್ತ ಕಾಳಜಿ ವಹಿಸಬೇಕು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದರು.

    ತಾಲೂಕಿನ ತುಮರಿಕೊಪ್ಪ ಗ್ರಾಮದ ಸೇಂಟ್ ಝೇವಿಯರ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಡೆಂೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಡೆಂೆ ಹರಡಲು ಮುಖ್ಯ ಕಾರಣ ಸೊಳ್ಳೆಗಳು. ಹೀಗಾಗಿ ಪರಿಸರ ಸ್ವಚ್ಛತೆಗೆ ಗಮನ ಹರಿಸಬೇಕು. ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು’ ಎಂದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಮಾತನಾಡಿ, ಮಳೆಗಾಲದಲ್ಲಿ ರೋಗಗಳು ವೇಗವಾಗಿ ಹರಡುವ ಸಾಧ್ಯತೆ ಇರುತ್ತದೆ. ಮಕ್ಕಳು ಮತ್ತು ವೃದ್ಧರು ಯಾವಾಗಲೂ ಜಾಗರೂಕರಾಗಿರಬೇಕು ಎಂದರು.

    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಆರ್. ಕುಲಕರ್ಣಿ ಮಾತನಾಡಿ, ಈಡಿಸ್ ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನೀರು ಸಂಗ್ರಹಿಸುವ ಪಾತ್ರೆಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಸೊಳ್ಳೆ ಪರದೆಗಳು ಮತ್ತು ನಿವಾರಕಗಳನ್ನು ಬಳಸುವುದು ಒಳಿತು ಎಂದರು.

    ತಾ.ಪಂ ಇಒ ಪರಶುರಾಮ ಸಾವಂತ, ಮುಖ್ಯೋಪಾಧ್ಯಾಯ ಸುನಿತಾ ಫರ್ನಾಂಡಿಸ್, ತಾಲೂಕು ವೈದ್ಯಾಧಿಕಾರಿ ಎನ್.ಬಿ ಕರ್ಲವಾಡ, ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್, ಡಾ. ಸಿದ್ಧಾರ್ಥ, ಫಕೀರೇಷ ಕಿಳ್ಳಿಕ್ಯಾತರ, ಚೇತನ ಎನ್, ರತ್ನಂ ಶೀಲಿ, ನಿಂಗಮ್ಮ ಕುರುಬರ, ಬೆಂಜಮೀನ್ ತಂಗೊಡ, ಸುಜಾತಾ ಚವ್ಹಾಣ, ಮೇಘಾ ಕಂಬಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts