ಮನೆ ಪರಿಸರದಲ್ಲಿ ಹಸಿರು ರಕ್ಷಣೆ : ಕಟಪಾಡಿ ಮಹೇಶ್ ಶೆಣೈ

ವಿಜಯವಾಣಿ ಸುದ್ದಿಜಾಲ ಶಿರ್ವ ಮರ, ಗಿಡ ಕಾಡುಗಳು ನಾಶವಾಗುತ್ತಿವೆ. ಮನುಷ್ಯನ ಜೀವನಕ್ಕೆ ಅಗತ್ಯ ಇರುವ ಜೀವವೈವಿಧ್ಯಗಳಲ್ಲಿ ಅತಿ ಮುಖ್ಯವಾಗಿದ್ದ ಗುಬ್ಬಚ್ಚಿಗಳು, ದುಂಬಿ, ಚಿಟ್ಟೆ, ಹಾವುಗಳ ಸಂತತಿ ನಶಿಸುತ್ತಿದೆ. ಇದಕ್ಕಾಗಿ ಪ್ರತಿ ಮನೆ, ಪರಿಸರದಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಕಟಪಾಡಿ ಮಹೇಶ್ ಶೆಣೈ ಹೇಳಿದರು. ಬಂಟಕಲ್ಲು ಆಲ್ಪ್ರೈಡ್ ವಿನ್ಸೆಂಟ್ ಮೋನಿಸ್‌ರವರ ಪ್ರಾಯೋಜಕತ್ವದಲ್ಲಿ ಸ್ವಂತ ಭೂಮಿಯಲ್ಲಿ ಇಂದ್ರಪ್ರಸ್ಥ ಅರಣ್ಯೀಕರಣ ಯೋಜನೆಯಡಿಯಲ್ಲಿ ಮಿಯಾವಾಕಿ ವನ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಮಾಣಿಪಾಡಿ ರತ್ನಾಕರ ಶೆಟ್ಟಿ … Continue reading ಮನೆ ಪರಿಸರದಲ್ಲಿ ಹಸಿರು ರಕ್ಷಣೆ : ಕಟಪಾಡಿ ಮಹೇಶ್ ಶೆಣೈ