More

    ಹೈಕಮಾಂಡ್ ಕ್ಲಾಸ್​ನಲ್ಲಿ ಏನೆಲ್ಲ ಚರ್ಚೆಗೆ ಬರಬಹುದು? ಸಚಿವರ ತಯಾರಿ ಹೇಗಿದೆ?

    ಬೆಂಗಳೂರು: ಹೊಸ ಸರ್ಕಾರದ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2ರಂದು ಸಂಪುಟ ಸದಸ್ಯರು ಮತ್ತು ಆಯ್ದ ಮುಖಂಡರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದು, ಸಚಿವರೆಲ್ಲ ತಮ್ಮ ಎರಡು ತಿಂಗಳ ಕಾರ್ಯವೈಖರಿ ವರದಿ ಸಿದ್ಧಪಡಿಸಿಕೊಂಡಿದ್ದಾರೆ.

    ಸರ್ಕಾರದ ಇಮೇಜ್ ಹೆಚ್ಚಿಸುವುದು, ಗೊಂದಲಗಳನ್ನು ಬಗೆಹರಿಸುವುದು, ಕಳೆದ ಎರಡು ತಿಂಗಳಲ್ಲಿ ಸರ್ಕಾರದ ಕುರಿತು ಬಂದ ದೂರುಗಳ ಬಗ್ಗೆ ವಿಚಾರಣೆ, ಮುಂದೆ ಮಾಡಬೇಕಾದ ಚಟುವಟಿಕೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವುದು.

    ಆಗಸ್ಟ್ 1ರಂದು ಮಧ್ಯಾಹ್ನದ ಬಳಿಕ ಅರ್ಧದಷ್ಟು ಮಂದಿ ದೆಹಲಿಗೆ ಪ್ರಯಾಣ ಬೆಳೆಸಿದರೆ ಸಿಎಂ ಸೇರಿ ಉಳಿದವರು 2ರಂದು ಬೆಳಗ್ಗೆ ಹೊರಡಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ 34 ಮಂದಿಗೆ ಆಹ್ವಾನವಿದೆ. ಎಲ್ಲ ಸಚಿವರಿಗೂ ಬರ ಹೇಳಿಲ್ಲ ಎನ್ನಲಾಗಿದೆ.

    ಯಾರಿಗೆಲ್ಲ ಆಹ್ವಾನ ಬಂದಿದೆಯೋ ಅವರೆಲ್ಲ ತಾವು ಯಾವೆಲ್ಲ ವಿಚಾರ ಪ್ರಸ್ತಾಪಿಸಬೇಕೆಂಬ ಬಗ್ಗೆ ಮತ್ತು ಹೈಕಮಾಂಡ್ ಬಯಸುವ ಮಾಹಿತಿ ಕಲೆ ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇನ್ನು ಅರ್ಧದಷ್ಟು ಶಾಸಕರಿಗೆ ನಿಗಮ ಮಂಡಳಿ ಸ್ಥಾನ ಮಾಡನ ನೀಡುವುದು, ಉಳಿದರ್ಧ ನಿಗಮಗಳಿಗೆ ಜಿಲ್ಲೆಗೊಬ್ಬರಂತೆ ಪಕ್ಷದ ಮುಖಂಡರಿಗೆ ನಿಗಮ ಮಂಡಳಿ ಜವಾಬ್ದಾರಿ ನೀಡಲು ನಿರ್ಧಾರವಾಗಿದ್ದು ಸಂಭಾವ್ಯರ ಪಟ್ಟಿ ಕೂಡ ಸಿದ್ಧವಾಗುವ ಹಂತದಲ್ಲಿದೆ. ಪರಿಷತ್‌ನ ಮೂರು ಸ್ಥಾನಗಳಿಗೆ ನಾಮನಿರ್ದೇಶನ ಆಗಬೇಕಿದ್ದು, ಆರು ಹೆಸರುಗಳು ಚರ್ಚೆಯಲ್ಲಿದೆ. ಈ ವಿಚಾರ ಕೂಡ ದೆಹಲಿಯಲ್ಲಿ ಚರ್ಚೆಯಾಗಿ ಅಂತಿಮಗೊಳ್ಳಲಿದೆ.

    ಬಹು ಮುಖ್ಯವಾಗಿ ಸಚಿವರ ವಿರುದ್ಧ ಶಾಸಕರ ದೂರು ಸೇರಿ ಸರ್ಕಾರದ ಕುರಿತು ಎದ್ದಿರುವ ಅಪಸ್ವರದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕೂಡ ದೆಹಲಿಗೆ ತೆರಳುವವರ ಪಟ್ಟಿಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts