More

    ಬೆಲೆ ಏರಿಕೆ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ನೀತಿ: ಬಿಜೆಪಿ ಆಕ್ರೋಶ

    ಬೆಂಗಳೂರು: ನಂದಿನಿ ಹಾಲಿನ ಪ್ರಮಾಣದ ಜತೆಗೆ ಬೆಲೆಯನ್ನೂ ಇಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯದ ಹಲವೆಡೆ ಪ್ರತಿಭಟನಾ ಮೆರವಣಿಗೆ, ಧರಣಿ ಶನಿವಾರ ನಡೆಯಿತು.

    ರೈತ ಮೋರ್ಚಾ ಜತೆಗೆ ಪಕ್ಷದ ರಾಜ್ಯ, ಜಿಲ್ಲಾ ನಾಯಕರು, ಕಾರ್ಯಕರ್ತರು ಜತೆಯಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಸುವಿನೊಂದಿಗೆ ಧಾವಿಸಿದ ಪ್ರತಿಭಟನಾಕಾರರು ಹಾಲು ಕಾಯಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

    ರಾಜ್ಯ ಸರ್ಕಾರದ ವಿರುದ್ಧ ೋಷಣಾ ಲಕ ಪ್ರದರ್ಶಿಸಿ, ಧಿಕ್ಕಾರ ಮೊಳಗಿಸಿದರು. ಬೆಲೆಗಳ ಏರಿಕೆಯಿಂದ ಬಸವಳಿದ ಜನರು, ಸಮಸ್ಯೆಗೆ ಸಿಲುಕಿದ ರೈತರ ನೆರವಿಗೆ ಕಾಂಗ್ರೆಸ್ ಸರ್ಕಾರ ಬರುವ ತನಕ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದೂ ಎಚ್ಚರಿಸಿದರು.

    ದುಬಾರಿ ಬದುಕು

    ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ ಆಸ್ತಿ ನೋಂದಣಿ ಶುಲ್ಕ, ಮಾರ್ಗಸೂಚಿ ದರ, ವಿದ್ಯುತ್ ಶುಲ್ಕ, ತೈಲ ಬೆಲೆಗಳ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗಿ ಜನರ ಬದುಕು ತತ್ತರಿಸಿದೆ.

    ಇದು ಸಾಲದೆಂಬಂತೆ ನಂದಿನಿ ಹಾಲಿನ ದರವನ್ನೂ ಹೆಚ್ಚಿಸಿದೆ. ಗ್ಯಾರಂಟಿಗಳ ಹೆಸರಿನಲ್ಲ ಎಲ್ಲ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದ ಪಾಲು, ಡೀಸೆಲ್ ಸಬ್ಸಿಡಿ ನಿಲ್ಲಿಸಿದರು. ಹಾಲು ಉತ್ಪಾದಕರಿಗೆ ಸಬ್ಸಿಡಿ 1000 ಕೋಟಿ ರೂ. ಬಾಕಿಯಿರಿಸಿಕೊಂಡಿದೆ. ಈಗ ನಂದಿನಿ ಹಾಲು ದರ ಹೆಚ್ಚಿಸಿದರೂ ಅದರ ಲಾಭ ರೈತರಿಗೆ ಕೊಡುತ್ತಿಲ್ಲ.ಇದೊಂದು ರೈತ, ಜನ ವಿರೋಧಿ ಸರ್ಕಾರವೆಂದು ಎನ್.ರವಿಕುಮಾರ್ ವಾಗ್ದಾಳಿ ಮಾಡಿದರು.

    ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ ಹೆಚ್ಚು ಹಾಲು ಬೇಕೆಂದು ಯಾವ ಗ್ರಾಹಕರೂ ಕೇಳಿಲ್ಲ. ಆದರೂ ಸರ್ಕಾರ ಮೊಂಡು ವಾದಕ್ಕೆ ಇಳಿದಿದೆ ಎಂದು ಚಾಟಿ ಬೀಸಿದರು.

    ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಶಾಸಕ ಸಿ.ಕೆ.ರಾಮಮೂರ್ತಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts