More

    ಮಿತ್ತಡ್ಕದಲ್ಲಿ ಮನೆಯ ಆವರಣ ಗೋಡೆ ಧರಾಶಾಯಿ: ಕೋನಡ್ಕದಲ್ಲಿ ರಸ್ತೆಬದಿ ಕುಸಿದು ಅಪಾಯದಲ್ಲಿ ಮನೆ

    ಪುತ್ತೂರು ಗ್ರಾಮಾಂತರ: ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಮನೆಯೊಂದರ ಆವರಣ ಗೋಡೆ ಕುಸಿದಿದೆ. ಇರ್ದೆ ಗ್ರಾಮದ ಕೋನಡ್ಕ ಜನತಾ ಕಾಲನಿ ಸಂಪರ್ಕದ ಕಾಂಕ್ರೀಟ್ ರಸ್ತೆ ಬದಿ ಬುಧವಾರ ರಾತ್ರಿ ಕುಸಿತಕ್ಕೊಳಗಾಗಿದೆ.

    ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ನಿವಾಸಿ ಯೋಗೀಶ್ ಗೌಡ ಎಂಬುವರ ಮನೆಯ ಎದುರಿನ ಆವರಣ ಗೋಡೆ ಕುಸಿದಿದೆ. ಮಿತ್ತಡ್ಕ -ಒಡ್ಯ ರಸ್ತೆಯ ಪಕ್ಕದಲ್ಲಿರುವ ಚರಂಡಿ ಬದಿಗೆ ಯೋಗೀಶ್ ಕಳೆದ ವರ್ಷ ಕೆಂಪುಕಲ್ಲು ಬಳಸಿಕೊಂಡು ನಿರ್ಮಿಸಿದ್ದ 60 ಅಡಿ ಉದ್ದದ ಆವರಣ ಗೋಡೆ ಜಡಿಮಳೆಯಿಂದಾಗಿ ಗುರುವಾರ ಕುಸಿದಿದೆ. ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾಪಂ ಸದಸ್ಯ ಗಂಗಾಧರ್ ಎಂ.ಎಸ್.ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ರಸ್ತೆ ಬದಿಯ ದರೆ ಕುಸಿತ

    ಇರ್ದೆ ಗ್ರಾಮದ ಕೋನಡ್ಕ ಜನತಾ ಕಾಲನಿ ಸಂಪರ್ಕದ ಕಾಂಕ್ರೀಟ್ ರಸ್ತೆ ಬದಿ ಬುಧವಾರ ರಾತ್ರಿ ರಸ್ತೆ ದರೆ ಕುಸಿತಗೊಂಡ ಸ್ಥಳದ ಬದಿ ಕೆಳಭಾಗದಲ್ಲಿ ಸಮೀರ್ ಎಂಬುವರ ಮನೆಯಿದ್ದು, ದರೆ ಇನ್ನಷ್ಟು ಕುಸಿದರೆ ಮನೆಗೆ ಹಾನಿಯಾಗುವ ಸಾಧ್ಯತೆ ಇದೆ. ಸ್ಥಳಕ್ಕೆ ಗುರುವಾರ ಬೆಟ್ಟಂಪಾಡಿ ಗ್ರಾಪಂ ಅಧ್ಯಕ್ಷ ವಿದ್ಯಾಶ್ರೀ, ಸದಸ್ಯರಾದ ಮೊಯ್ದುಕುಞಿ ಕೋನಡ್ಕ, ಮಹಾಲಿಂಗ ನಾಯ್ಕ ಹಾಗೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts