More

    ಚೆನ್ನೈ ವಿಮಾನ ನಿಲ್ದಾಣದಲ್ಲಿ 21 ಕೋಟಿ ರೂ. ಮೌಲ್ಯದ ಕೊಕೇನ್ ವಶ!

    ಚೆನ್ನೈ: ಪಶ್ಚಿಮ ಆಫ್ರಿಕಾದ ಘಾನದಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರೊಬ್ಬರಿಂದ ಸುಮಾರು 21 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಹೆಚ್ಚು ಪ್ರಮಾಣದ ಕೊಕೇನ್ ವಶಪಡಿಸಿಕೊಂಡಿದ್ದಾರೆ ಎಂದು ಕಸ್ಟಮ್ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

    ಪಶ್ಚಿಮ ಆಫ್ರಿಕಾ ದೇಶದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಜೂನ್ 26ರಂದು ಬಂದಳಿದ ಮಹಿಳೆಯು ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಕಂಡ ಅಧಿಕಾರಿಗಳು ಪರಿಶೀಲಿಸಿದಾಗ ಹ್ಯಾಂಡ್ ಬ್ಯಾಗ್​​ನಲ್ಲಿ ಕೊಕೇನ್ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಆಕೆಯ ಬ್ಯಾಗ್​ ಮತ್ತು ಚಪ್ಪಲಿಯಲ್ಲಿ ಪುಡಿ ರೂಪದಲ್ಲಿರುವ ಮಾದಕ ವಸ್ತುವನ್ನು ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ ಎಂದುಚೆನ್ನೈ ಕಸ್ಟಮ್​ ವಲಯದ ಮುಖ್ಯ ಆಯುಕ್ತ ಆರ್. ಶ್ರೀನಿವಾಸ್​ ನಾಯಕ್ ತಿಳಿಸಿದ್ದಾರೆ.

    ಬಂಧಿತ ಮಹಿಳೆಯಿಂದ 21 ಕೋಟಿ ಮೌಲ್ಯದ 2,095 ಗ್ರಾಂ ಕೊಕೇನ್ ವಶಪಡಿಸಲಾಗಿದ್ದು, ಆಕೆಯ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಪುಝಲ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸದನದಲ್ಲಿದಿದ್ದರೆ ತಪ್ಪು ಮಾಡುವವರ ಮುಖಕ್ಕೆ ಹೊಡೆಯುತ್ತಿದ್ದೆ ಎಂದ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts