More

    ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಕೇಸ್ ಸಿಐಡಿ ತನಿಖೆಗೆ ವಹಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 15 ರಂದು ನಡೆದಿದ್ದ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್​ನ್ನು ಸಿಐಡಿಗೆ ವಹಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

    ಮೃತಳ ತಾಯಿ ಸೌಮ್ಯಾ ಅವರು ಖುದ್ದು ಮುಖ್ಯಮಂತ್ರಿ ಭೇಟಿಯಾಗಿ ಮನವಿ ಮಾಡಿದ್ದರು. ಅವರ ದೂರಿನ ಮೇರೆಗೆ ಸಿಐಡಿಗೆ ವಹಿಸಲು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

    ಸಾಮಾಜಿಕ ಕಾರ್ಯಕರ್ತೆ ಆಗಿರುವ ಕೆ.ಆರ್.ಸೌಮ್ಯ ಅವರು ತಮ್ಮ ಪುತ್ರಿ ಸಾವಿನ ಪ್ರಕರಣದ ತನಿಖೆಗೆ ಒಪ್ಪಿಸಲು ಸಾಮಾಜಿಕ ಕಾರ್ಯಕರ್ತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಮುಖ್ಯಮಂತ್ರಿಗಳು ಮನವಿ ಪುರಸ್ಕರಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಬುದ್ಧಾ ತಾಯಿ ಸೌಮ್ಯಾ, ಡಿಗ್ರಿ ಓದುತ್ತಿದ್ದ ನನ್ನ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೆಲವು ಅನುಮಾನಗಳಿದ್ದವು, ಆ ಯುವಕನಿಗೆ ಬೇಲ್ ಕೂಡ ಸಿಕ್ಕಿತ್ತು. ಆರೋಪಿಗೆ ಬೇಲ್ ಸಿಕ್ಕಿದೆ ಅಂತಾ ನಾವು ಸುಮ್ಮನಿದ್ದರೆ ಸರಿ ಹೋಗಲ್ಲ. ಹಾಗಾಗಿ ಸಿಐಡಿಗೆ ಕೊಡಬೇಕು ಅಂತಾ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆವು ಎಂದರು.  ನನ್ನ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿಗೆ ವಹಿಸಿದ್ದಾರೆ. ಹೆಣ್ಣುಮಕ್ಕಳು ನಿರಾಕರಿಸಿದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಸಮಾಜಕ್ಕೆ ಯಾವ ಸಂದೇಶ ಸಿಗುತ್ತಿದೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

    ಘಟನೆ ಹಿನ್ನೆಲೆ: ಪದ್ಮನಾಭನಗರ ವ್ಯಾಪ್ತಿಯ ಬೃಂದಾವನ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ (20) ಸಾವಿನ ರಹಸ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಕೊಲೆ ಆರೋಪಿ 15 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದರು.
    ಪ್ರಬುದ್ಧಾ ಕುಟುಂಬಕ್ಕೆ ಪರಿಚಯಸ್ಥನಾಗಿರುವ ಅಪ್ರಾಪ್ತ, ಕೆಲ ದಿನಗಳ ಹಿಂದೆ ಅವರ ಮನೆಯಲ್ಲಿ 2000 ಸಾವಿರ ರೂ. ಕದ್ದಿದ್ದ. ಇದನ್ನು ನೋಡಿದ್ದ ಪ್ರಬುದ್ಧಾ, ಪೋಷಕರಿಗೆ ತಿಳಿಸುವುದಾಗಿ ಹೇಳಿದ್ದರು. ಈ ಕಾರಣಕ್ಕೆ ಪ್ರಬುದ್ಧಾಳನ್ನು ಮೇ 15ರಂದು ಚಾಕುವಿನಿಂದ ಕತ್ತು, ಕೈ ಕುಯ್ದು ಅಮಾನುಷವಾಗಿ ಕೊಲೆಗೈದಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು.

    ಸಾಮಾಜಿಕ ಹೋರಾಟಗಾರ್ತಿ ಸೌಮ್ಯಾ ಅವರ ಪುತ್ರಿ ಪ್ರಬುದ್ಧಾ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೇ 15ರಂದು ಕಾಲೇಜು ಮುಗಿಸಿಕೊಂಡು ಮನೆಗೆ 2 ಗಂಟೆ ಸುಮಾರಿಗೆ ವಾಪಸ್ಸಾಗಿದ್ದರು. ಈ ನಡುವೆ, ಫುಟ್ಬಾಲ್‌ ಆಡಲು ಹೊರಗಡೆ ಹೋಗಿದ್ದ ತಮ್ಮ ಏಳು ಗಂಟೆ ಸುಮಾರಿಗೆ ವಾಪಸ್‌ ಮನೆಗೆ ಬಂದಾಗ ಬಾಗಿಲು ತಟ್ಟಿದರೂ ತೆಗೆದಿರಲಿಲ್ಲ. ಫೋನ್‌ ಮಾಡಿದರೂ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ, ಮನೆಯ ಹಿಂದಿನ ಡೋರ್‌ ಬಳಿ ತೆರಳಿ ತಳ್ಳಿದ ಕೂಡಲೇ ತೆರೆದುಕೊಂಡಿತ್ತು. ಒಳಗಡೆ ಬಂದು ನೋಡಿದಾಗ ಬಾತ್‌ರೂಂನಲ್ಲಿ ಪ್ರಬುದ್ಧಾ ಕತ್ತು, ಎಡಕೈ ಕುಯ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಪ್ರಬುದ್ಧಾ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಆರಂಭದಲ್ಲಿ ಸ್ವಯಂ ಆತ್ಮಹತ್ಯೆ ಶಂಕೆಯೂ ವ್ಯಕ್ತವಾಗಿದ್ದರಿಂದ ಅಸಹಜ ಸಾವು ಕೇಸ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿತ್ತು.

    ಭಾರತ-ಬಾಂಗ್ಲಾ ಮಾತುಕತೆಗೆ ಆಹ್ವಾನಿಸದ್ದಕ್ಕೆ ಮಮತಾ ಬ್ಯಾನರ್ಜಿ ಗರಂ: ಪ್ರಧಾನಿ ಮೋದಿಗೆ ಪತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts