More

    ಪೊಲೀಸ್ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

    ಹಲಗೂರು: ಇಲ್ಲಿನ ಪೊಲೀಸ್ ಠಾಣೆಯ ಸುತ್ತಲಿನ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಯನ್ನು ಠಾಣೆ ಸಿಬ್ಬಂದಿ ತೆರವು ಮಾಡುವುದರ ಜತೆಗೆ ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

    ಸಬ್ಇನ್‌ಸ್ಪೆಕ್ಟರ್ ಬಿ.ಮಹೇಂದ್ರ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿ ಶನಿವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಠಾಣೆ ಹಿಂಭಾಗದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಳಿಂದ ಸೊಳ್ಳೆಗಳು ಹಾಗೂ ವಿಷಜಂತುಗಳು ಸೇರಿಕೊಳ್ಳುವ ಸಾಧ್ಯತೆ ಇದ್ದುದ್ದರಿಂದ ನಾವೇ ಸ್ವಚ್ಛತೆ ಮಾಡಿದ್ದೇವೆ. ಇದು ನಮ್ಮ ಮನೆಯ ಕೆಲಸವೆಂದು ಭಾವಿಸಿ ಸಿಬ್ಬಂದಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಢಿದ್ದರು ಎಂದು ಮಹೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts