More

    ಪುತ್ತೂರಿನಿಂದ ಕೌಡಿಚ್ಚಾರ್‌ಗೆ ಸಿಟಿ ಬಸ್

    ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

    ಪುತ್ತೂರಿನಿಂದ ಸಂಪ್ಯ-ಕುಂಬ್ರ ಮೂಲಕ ಕೌಡಿಚ್ಚಾರ್ ತನಕ ಕೆಎಸ್ಸಾರ್ಟಿಸಿ ಸಿಟಿ ಬಸ್ ಸಂಚಾರ ಶುಕ್ರವಾರ ಆರಂಭಗೊಂಡಿದ್ದು, ಕೌಡಿಚ್ಚಾರಿಗೆ ಬಸ್ ತಲುಪುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚಿ ಸಂಭ್ರಮ ಆಚರಿಸಿದರು. ಬಸ್ಸಿಗೆ ಹೂವಿನ ಹಾರ ಹಾಕಿ, ತೆಂಗಿನ ಕಾಯಿ ಒಡೆಯುವ ಮೂಲಕ ಸ್ವಾಗತ ಕೋರಿದರು.

    ಕೌಡಿಚ್ಚಾರಿನಲ್ಲಿ ಸಿಟಿ ಬಸ್ ವ್ಯವಸ್ಥೆಗೆ ಚಾಲನೆ ನೀಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕೌಡಿಚ್ಚಾರ್ ವ್ಯಾಪ್ತಿಯಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಮನಗಂಡು ಸಿಟಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಿಗೆ ಕೆಲದಿನಗಳ ಹಿಂದೆ ಮನವಿ ಮಾಡಿದ್ದೆವು. ಮನವಿ ಪುರಸ್ಕರಿಸಿದ ಶಾಸಕರು ಕೆಲವೇ ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ ಎಂದರು.

    ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿದರು.

    ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗ್ರಾಪಂ ಸದಸ್ಯರಾದ ಜಯಂತಿ ಪಟ್ಟುಮೂಲೆ, ವಿನುತಾ, ಶೀನಪ್ಪ ನಾಯ್ಕ, ಕಾಂಗ್ರೆಸ್ ಮುಖಂಡರಾದ ರಾಜೀವ ರೈ ಕುತ್ಯಾಡಿ, ಶಿವರಾಮ ಮಣಿಯಾಣಿ, ಚಂದ್ರಶೇಖರ ಮಣಿಯಾಣಿ ಕುರಿಂಜ, ಸುಂದರ ಮುಂಡಕೊಚ್ಚಿ, ರವಿಮುಡಂಕೊಚ್ಚಿ, ಶೀನಪ್ಪ ಮುಂಡಕೊಚ್ಚಿ, ಬಶೀರ್ ಕೌಡಿಚ್ಚಾರ್, ಮಹಮ್ಮದ್ ಬೊಳ್ಳಾಡಿ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ವಿಠಲ್ ನಾಯ್ಕ ಬಳ್ಳಿಕಾನ, ಗಂಗಾಧರ ಪಾಟಾಳಿ ಪಟ್ಟುಮೂಲೆ, ಅನ್ನಪೂರ್ಣಿಮಾ ರೈ ಕುತ್ಯಾಡಿ, ಹನೀಫ್ ಶೇಕಮಲೆ, ರಫೀಕ್ ದರ್ಖಾಸು, ಕೇಶವ ಶೇಕಮಲೆ, ರವಿ ಜಾರತ್ತಾರು, ಶಿವರಾಮ ಮಣಿಯಾಣಿ, ಇಸ್ಮಾಯಿಲ್ ಹೊಸಗದ್ದೆ, ಬದ್ರು ಪರ್ಪುಂಜ, ಜೀವನ್ ಕುರಿಂಜ, ಚಂದ್ರ ಮಣಿಯಾಣಿ ಕುಂಟಾಪು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts