ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಕರಾಗಿ ಆಯ್ಕೆ

ಗಂಗೊಳ್ಳಿ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶರಾವತಿ ನಗರ ಶಿವಮೊಗ್ಗ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿ ಶಿವಮೊಗ್ಗ ಆಶ್ರಯದಲ್ಲಿ ನಡೆಯಲಿರುವ 19ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿನಿ, ಪವಿತ್ರಾ ಎನ್. ದೇವಾಡಿಗ ಆಯ್ಕೆಯಾಗಿದ್ದಾರೆ. ಉಪ್ಪುಂದ ಮೂರ್ತಿಮನೆ ಮೊಗೇರಿ ನಾಗರಾಜ್-ಸೀತಾ ದೇವಾಡಿಗ ದಂಪತಿ ಪುತ್ರಿ.