More

    ಮಕ್ಕಳಿಗೆ ಪುಸ್ತಕ ಅಭಿರುಚಿ ಬೆಳೆಸಬೇಕಿದೆ: ಐಎಎಸ್​ ಅಧಿಕಾರಿ ವಿದ್ಯಾ ಹೇಳಿಕೆ

    ಬೆಂಗಳೂರು: ಶಾಲಾಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಬೇಕಿದೆ ಎಂದು ಪಂಚಾಯತ್​ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತೆ ವಿದ್ಯಾ ಹೇಳಿದ್ದಾರೆ.

    ಮಲ್ಲೇಶ್ವರದ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ “ಕರ್ನಾಟಕ ಪುಸ್ತಕ ಪರಿಕ್ರಮ’ ವಾಹನಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು. ಮಕ್ಕಳಿಗೆ ಓದುವ ಅಭ್ಯಾಸವನ್ನು ಬೆಳೆಸಲು ಇದೊಂದು ಉತ್ತಮ ಅವಕಾಶವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕಗಳು ತಲುಪಿ ಇನ್ನಷ್ಟು ಓದುವ ಅಭಿರುಚಿ ಬೆಳೆಸಲು ಸಹಾಯವಾಗಲಿದೆ ಎಂದರು.

    ರಾಕೇಶ್​ ಶೆಟ್ಟಿ ವಿರುದ್ಧ 21 ಕ್ರಿಮಿನಲ್​ ಕೇಸ್​: ಗೂಂಡಾ ಕಾಯ್ದೆಯಡಿ ಬಂಧಿಸಲು ಗಿರೀಶ ಮಟ್ಟಣ್ಣವರ್​ ಆಗ್ರಹ
    ನ್ಯಾಷನಲ್​ ಬುಕ್​ ಟ್ರಸ್ಟ್​ನ ದಣ ಭಾರತದ ಪ್ರಾಂತೀಯ ಉಸ್ತುವಾರಿ ಅಧಿಕಾರಿ ಡಾ.ಪತ್ತಿಪಾಕ ಮೋಹನ್​ ಮಾತನಾಡಿ, ಭಾರತದ ಉದ್ದಗಲಕ್ಕೂ ಓದುವ ಸಂಸತಿ ಬೆಳೆಸಲು ನಮ್ಮ ಸಂಸ್ಥೆಯಿಂದ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ಇದೇ ವೇಳೆ ಶಾಲಾ ಮಕ್ಕಳಿಂದ ಕಥೆ ಹೇಳುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರೀಯ ವಿದ್ಯಾಲಯದ ಮುಖ್ಯ ಶಿಕ್ಷಕಿ ನಿಧಿ ಬಲೂನಿ, ಸಿಸಿಎ ಸಂಯೋಜಕ ಕೆ. ಪರಮೇಶ್ವರ್​, ಕೆ. ರಾವತ್​, ಮಹೇಶ್​ಚಂದ್ರ ಮೀನಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts