More

    ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲಿ

    ರಾಯಬಾಗ: ಸರ್ಕಾರ ಮಕ್ಕಳಿಗೆ ಅನೇಕ ಸೌಕರ್ಯ ಕಲ್ಪಿಸಿದರೂ ಕೂಡ ಬಾಲ ಕಾರ್ಮಿಕ ಪದ್ಧತಿ ಜೀವಂತ ಇರುವುದು ಖೇದಕರ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾಮದೇವ ಕಾಂಬಳೆ ಹೇಳಿದರು.

    ತಾಲೂಕಿನ ಜಲಾಲಪುರ ಮತ್ತು ಭಿರಡಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಭಿಯಾನದಲ್ಲಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದರು.

    ಶಿಕ್ಷಕಿ ಬಿ.ಎಸ್.ವೀಣಾ ಮಾತನಾಡಿ, ಕಾನೂನು ಸೇವಾ ಸಮಿತಿಯು ವಕೀಲರ ಮೂಲಕ ಪ್ರತಿ ಗ್ರಾಮಗಳಲ್ಲಿ ಕಾನೂನಿನ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

    ವಕೀಲರಾದ ಎ.ಬಿ.ಪಡೋಲ್ಕರ್, ಎಸ್.ಎಂ.ಕಳ್ಳೆ, ಎಂ.ಎಸ್.ಪೂಜಾರಿ, ಡಿ.ಟಿ.ಕಾಮಗೌಡ, ಬಿ.ಡಿ.ಮಂಗಸೂಳೆ, ಸಿಆರ್‌ಪಿ ವಿ.ಎನ್.ಭೋಸಲೆ, ಮುಖ್ಯ ಶಿಕ್ಷಕ ಎ.ವಿ.ಮೊರಬದ, ಶಿಕ್ಷಕರಾದ ಪಿ.ಎಚ್.ಪಾಟೀಲ, ಎಸ್.ಎಂ.ಕಾಂಬಳೆ, ಎಸ್.ಬಿ.ಗುಡಾನವರ, ರಾಹುಲ ಶೇಲಾರ, ರಾಘವೇಂದ್ರ ಕಾಳೆ, ಎ.ಎ.ಕಾಂಬಳೆ, ಎಸ್.ಎಸ್.ಸಾನೆ, ಜಿ.ಕೆ.ಬಳಿಗಾರ, ಎಸ್.ಟಿ.ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts