More

    ಸಹಾಯಧನಕ್ಕೆ ಅರ್ಜಿ ಆಹ್ವಾನ

    ಯಳಂದೂರು: ಪಟ್ಟಣ ಪಂಚಾಯಿತಿ ಅನುಷ್ಠಾನಗೊಳಿಸುತ್ತಿರುವ ಡೇ-ನಲ್ಮ್ ಯೋಜನೆಯ ಎಸ್.ಇ.ಪಿ ಉಪ ಘಟಕದಡಿ 2024-25ನೇ ಸಾಲಿಗೆ ಸ್ವಯಂ ಉದ್ಯೋಗ ಪ್ರಾರಂಭಿಸುವವರಿಗೆ ಶೇ.7ಕ್ಕಿಂತ ಹೆಚ್ಚಿನ ಬಡ್ಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿಯನ್ನು ಯಳಂದೂರು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಪಡೆದು, ಜಾತಿ, ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, 2 ಭಾವಚಿತ್ರಗಳು, ಬ್ಯಾಂಕ್ ಪಾಸ್‌ಪುಸ್ತಕ, ಪಡಿತರ ಚೀಟಿ, ಇನ್ನಿತರ ಪ್ರಮಾಣ ಪತ್ರಗಳೊಂದಿಗೆ 2 ಲಕ್ಷ ರೂ. ಯೋಜನಾ ವರದಿ ಲಗತ್ತಿಸಿ ಜುಲೈ 1ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಡೇ ನಲ್ಮ್ ಶಾಖೆಯ ಮೊ. 9964466788, 9945709840 ಸಂಪರ್ಕಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts