More

    ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು – ಅರುಣ್ ಶಹಾಪುರ

    ಪುತ್ತೂರು: ರಾಜ್ಯದಲ್ಲಿ ನಡೆದ ಸಿಇಟಿ ಪರೀಕ್ಷೆಯ ಎಲ್ಲ ೪ ವಿಷಯಗಳಲ್ಲೂ ಸಿಲಬಸ್‌ನಿಂದ ಹೊರತಾದ ಪ್ರಶ್ನೆಗಳು ಪ್ರತ್ಯಕ್ಷಗೊಂಡಿರುವುದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಪರೀಕ್ಷೆ ಬರೆದ ೩ ಲಕ್ಷ ವಿದ್ಯಾರ್ಥಿಳು ಚಿಂತೆಗೀಡಾಗಿದ್ದುö, ಆತಂಕದಲ್ಲಿದ್ದಾರೆ. ಅವರ ಶೈಕ್ಷಣಿಕ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಪರೀಕ್ಷಾರ್ಥಿಗಳ ಭಯ ಹೋಗಲಾಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಶಹಾಪುರ ಹೇಳಿದರು.

    ಚುನಾವಣೆಯ ಒತ್ತಡದಲ್ಲಿರುವ ಪಕ್ಷಗಳು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಸ್ಥಿತಿಯಲ್ಲಿಲ್ಲö. ಸರಕಾರ ಸತ್ತಂತಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ ಕನಿಷ್ಠ ಪಕ್ಷ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಡೆದಿಲ್ಲö. ಮತ್ತೊಂದು ಕಡೆ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಅವರನ್ನು ತಕ್ಷಣ ಆ ಹುದ್ದೆಯಿಂದ ಅಮಾನತು ಮಾಡಬೇಕು. ಈ ದೊಡ್ಡ ಪ್ರಮಾದದ ಹಿಂದಿರುವ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜ್ಯದ ಉನ್ನತ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಎನ್‌ಸಿಇಆರ್‌ಟಿ ಮತ್ತು ಪಿಯು ಮಂಡಳಿ ನಿಯಮ ಪ್ರಕಾರ ಸಿಇಟಿ ಪರೀಕ್ಷೆ ನಡೆಯಬೇಕು. ಈ ಬಾರಿ ೪ ವಿಷಯಗಳಲ್ಲಿ ಕೂಡ ಸುಮಾರು ಶೇ.೨೫ರಷ್ಟು ಸಿಲಬಸ್‌ನಿಂದ ಹೊರತಾದ ಪ್ರಶ್ನೆಗಳು ಬಂದಿದೆ. ಹಿಂದಿನ ವರ್ಷಗಳಲ್ಲಿ ಪೂರ್ತಿ ಸಿಲಬಸ್ ಅನ್ವಯಗೊಂಡಿದ್ದರೆ, ಈ ಬಾರಿ ಸಿಲಬಸ್ ಕಡಿತಗೊಳಿಸಲಾಗಿತ್ತುö. ಆದರೆ ಪ್ರಶ್ನೆಗಳು ಮಾತ್ರ ಪೂರ್ತಿ ಸಿಲಬಸ್‌ನಿಂದ ಆರಿಸಿಕೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆ ತಯಾರಿಸಿದ ಉಪನ್ಯಾಸಕರಿಗೆ ಸಿಲಬಸ್ ಕಡಿತಗೊಳಿಸಿರುವುದು ಗೊತ್ತಿದ್ದರೂ, ಸಿಲಬಸ್‌ನಿಂದ ಹೊರತಾದ ಪ್ರಶ್ನೆಗಳನ್ನು ಅವರು ಬರೆಯಲು ಹೇಗೆ ಸಾಧ್ಯö? ಇದನ್ನು ಗಮನಿಸಿದಾಗ ಕಳೆದ ವರ್ಷದ ಪರೀಕ್ಷೆಯಲ್ಲಿ ತಯಾರಿಸಿದ ಹೆಚ್ಚುವರಿ ಪ್ರಶ್ನಾ ಪತ್ರಿಕೆಗಳನ್ನು ಈ ಬಾರಿ ಬಳಸಲಾಗಿದೆಯ ಎಂಬ ಗುಮಾನಿ ಬರುತ್ತದೆ ಎಂದರು.ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಿಇಟಿ ವರದಾನ. ಇದನ್ನು ದುರ್ಬಲಗೊಳಿಸಲು ಹೊರಗಿನಿಂದ ದೊಡ್ಡ ಮಟ್ಟದ ಮಾಫಿಯಾ ಕೆಲಸ ಮಾಡುತ್ತಿರುವ ಗುಮಾನಿ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಖೆಯಾಗಬೇಕು. ಅದರ ಜತೆಯಲ್ಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಅವರು ಮಾಡದ ತಪ್ಪಿಗೆ ಶಿಕ್ಷೆಯಾಗಬಾರದರು. ಇದಕ್ಕೆ ಏನು ಪರಿಹಾರ ಕಲ್ಪಿಸಲಾಗುತ್ತದೆ ಎಂಬ ಬಗ್ಗೆ ಸರಕಾರ ತಕ್ಷಣ ಬಹಿರಂಗಪಡಿಸುವ ಮೂಲಕ ವಿದ್ಯಾರ್ಥಿಗಳ ಆತಂಕ ದೂರ ಮಾಡಬೇಕು. ನಾನಾ ಬಗೆಯ ಪರಿಹಾರ ಕ್ರಮದ ಬಗ್ಗೆ ಚರ್ಚೆಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಗೊಂದಲ ಹೆಚ್ಚಾಗಲಿದ್ದುö, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ಸರಕಾರ ಊಹಾಪೋಹಗಳಿಗೆ ಅವಕಾಶ ಮಾಡಿ ಕೊಡದೆ ತಕ್ಷಣ ಪರಿಹಾರ ಕ್ರಮದ ಘೋಷಣೆ ಮಾಡಿ ಧೈರ್ಯ ತುಂಬಬೇಕು. ಎಲ್ಲ ೪ ವಿಷಯಗಳಲ್ಲಿ ಸಿಲಬಸ್ ಹೊರತಾದ ಪ್ರಶ್ನೆಗಳು ಬಂದಿರುವುದು ತಾಂತ್ರಿಕ ಪ್ರಮಾದವಾಗಿರಲು ಸಾಧ್ಯವಿಲ್ಲö. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈ ಬಗ್ಗೆ ತನಿಖೆ ನಡೆಸಬೇಕಲ್ಲದೆ, ಸಿಇಟಿಯನ್ನು ಬಲಪಡಿಸಲು ಇದು ಸಕಾಲವಾಗಿದೆ ಎಂದರು.

    ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ., ಉಪ್ಪಿನಂಗಡಿ ಇಂದ್ರಪ್ರಸ್ಥ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಯು.ಜಿ.ರಾಧಾ, ಪುತ್ತೂರು ನರೇಂದ್ರ ಕಾಲೇಜಿನ ಅಧ್ಯಕ್ಷರಾದ ಶ್ರೀಕಾಂತ್ ಕೊಳತ್ತಾಯ, ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರಮೇಶ್ ಕೆ. ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts