More

    ನಾಡಿನ ಅಭಿವೃದ್ದಿಗೆ ಕಾರಣರಾದವರು : ಮಾಜಿ ಶಾಸಕ ಗಂಗಾದರ ಗೌಡ ಹೇಳಿಕೆ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ದೆಹಲಿ, ಮುಂಬೈ ಬಿಟ್ಟರೆ ಬೆಂಗಳೂರು ಅತಿ ದೊಡ್ಡ ನಗರವಾಗಿದ್ದು ಇದಕ್ಕೆ ಕಾರಣ ಕೆಂಪೆಗೌಡರು.ಅವರು ನಾಡಿನ ಅಭಿವೃದ್ಧಿಗೆ ಕಾರಣವಾಗಿದ್ದರಿಂದ ಇವರಿಗೆ ನಾಡಪ್ರಭು ಎಂದು ಕರೆಯಲ್ಪಡುತ್ತಿದ್ದು, ಇಂತಹ ಮಹನಿಯರ ಹೆಸರಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಚಿವ ಕೆ.ಗಂಗಾದರ ಗೌಡ ಹೇಳಿದರು.

    ಗುರುವಾರ ಉಜಿರೆ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ, ಒಕ್ಕಲಿಗ ಗೌಡರ ಯುವ ಸಂಘ, ಒಕ್ಕಲಿಗ ಗೌಡರ ಮಹಿಳಾ ಸಂಘ, ಒಕ್ಕಲಿಗ ಗೌಡರ ಮಹಿಳಾ ಯುವ ಸಂಘ, ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ ಇದರ ಸಹಯೋಗದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ಮತ್ತು ಪ್ರಸನ್ನ ಶಿಕ್ಷಣ ಸಮೂಹ ವಿದ್ಯಾಸಂಸ್ಥೆಗಳು ಲಾಯಿಲ, ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಊರ ನಾಗರಿಕರ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಿದರು.

    ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಕಿವಿ, ಗಂಟಲು, ಮೂಗು ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಿಶ್ವವಿಜೇತ್ ಮಾತನಾಡಿ ರಕ್ತದಾನ ಮಾಡುವುದರಿಂದ ನಮ್ಮ ಅರೋಗ್ಯವನ್ನು ಉತ್ತಮಗೊಳಿಸುವ ಜತೆ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದರು.

    127 ಯುನಿಟ್ ರಕ್ತ ಸಂಗ್ರಹಿಸಲಾಯಿತು. ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ಉಜಿರೆ ಕಾಲಬೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಇಚ್ಚಿಲ, ಒಕ್ಕಲಿಗ ಸೇವಾ ಸಂಘದ ಜಿಲ್ಲಾ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ಒಕ್ಕಲಿಗ ಸೇವಾ ಸಂಘದ ಜಿಲ್ಲಾ ಜತೆಕಾರ್ಯದರ್ಶಿ ದಾಮೋದರ ಗೌಡ, ತಾಲೂಕು ಯುವ ಒಕ್ಕಲಿಗ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ತಾಲೂಕು ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಅಪರ್ಣಾ ಶಿವಕಾಂತ ಗೌಡ, ತಾಲೂಕು ಒಕ್ಕಲಿಗ ಯುವ ಮಹಿಳಾ ಸಂಘದ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ, ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸುನಿಧಿ ಉಪಸ್ಥಿತರಿದ್ದರು.

    ಪ್ರಕಾಶ್ ಗೌಡ ಕೆ. ಸ್ವಾಗತಿಸಿ ನಿತಿನ್ ಗೌಡ ,ಪ್ರಕಾಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಗೀತಾ ಗೌಡ ಬಡೆಗೊಟ್ಟು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts