More

    ಪುತ್ರನ ಮದ್ವೆ ಖುಷಿಯಲ್ಲಿದ್ದ ಮದ್ಯದ ದೊರೆಗೆ ಮತ್ತೊಂದು ಆಘಾತ! ವಿಜಯ್ ಮಲ್ಯಗೆ ಬಂಧನ ವಾರೆಂಟ್​

    ನವದೆಹಲಿ: ಬ್ಯಾಂಕ್​ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್​ ಮಲ್ಯಗೆ ಸಂಕಷ್ಟವೊಂದು ಎದುರಾಗಿದೆ. ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ (ಐಒಬಿ)ಗೆ ಸಂಬಂಧಿಸಿದ 180 ಕೋಟಿ ರೂ. ಸಾಲ ಮರು ಪಾವತಿ ಮಾಡದ ಪ್ರಕರಣದಲ್ಲಿ ವಿಜಯ್​ ಮಲ್ಯಗೆ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್​ ಜಾರಿ ಮಾಡಿದೆ.

    ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಎಸ್​ಪಿ ನಾಯಕ್​ ನಿಂಬಾಳ್ಕರ್​ ಎಂಬುವರು ಜೂನ್​ 29ರಂದು ಬಂಧನ ವಾರೆಂಟ್​ ಹೊರಡಿದ್ದಾರೆ. ಈ ಆದೇಶದ ಸಂಪೂರ್ಣ ಮಾಹಿತಿ ಸೋಮವಾರ ಲಭ್ಯವಾಗಿದೆ. ಸಿಬಿಐ ನ್ಯಾಯಾಲಯವು ಮಲ್ಯ ಅವರ ಸ್ಟೇಟಸ್​ ಅನ್ನು “ಪರಾರಿ” ಎಂದು ಒತ್ತಿಹೇಳಿದೆ ಮತ್ತು ಸಿಬಿಐ ಸಲ್ಲಿಸಿರುವ ಆಧಾರದ ಮೇಲೆ ಅವರ ವಿರುದ್ಧ ನೀಡಲಾದ ಹಿಂದಿನ ಜಾಮೀನು ರಹಿತ ವಾರೆಂಟ್​ಗಳನ್ನು ಉಲ್ಲೇಖಿಸಿ, ಮಲ್ಯ ಉಪಸ್ಥಿತಿಯನ್ನು ಭದ್ರಪಡಿಸಿಕೊಳ್ಳಲು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್​ ಹೊರಡಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಕೋರ್ಟ್​ ಹೇಳಿದೆ.

    ಈಗ ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪ್ರವರ್ತಕರಾಗಿರುವ ವಿಜಯ್​ ಮಲ್ಯ, ಉದ್ದೇಶಪೂರ್ವಕವಾಗಿ ಸಾಲ ಪಾವತಿಯನ್ನು ನಿಲ್ಲಿಸುವ ಮಾಡುವ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗೆ 180 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಆರೋಪ ಮಾಡಿದೆ.

    ಪ್ರಸ್ತುತ ಲಂಡನ್‌ನಲ್ಲಿ ನೆಲೆಸಿರುವ ಮಲ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಪ್ರತ್ಯೇಕ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಗಾಗಲೇ ಮಲ್ಯರನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ಭಾರತ ಸರ್ಕಾರವೂ ಮಲ್ಯ ಹಸ್ತಾಂತರಕ್ಕಾಗಿ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ.

    2007 ಮತ್ತು 2012 ರ ನಡುವೆ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಿಂದ ಕಿಂಗ್‌ಫಿಷರ್ ಏರ್‌ಲೈನ್ಸ್ ಪಡೆದಿರುವ ಸಾಲಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ ಇತ್ತೀಚಿನ ವಾರೆಂಟ್ ಹೊರಡಿಸಿದೆ. (ಏಜೆನ್ಸೀಸ್)

    ಅಹಂಕಾರ ತಲೆಗೆ ಏರಿದರೆ ಆ ದೇವರೇ ಕೆಳಗೆ ಬೀಳಿಸ್ತಾನೆ ನನಗೂ ಅದೇ ಆಗಿದ್ದು! ಕೊಹ್ಲಿ ಶಾಕಿಂಗ್​ ಹೇಳಿಕೆ

    ಇದನ್ನು ಸಾಧಿಸಲೇಬೇಕು… ಕೋಚ್​ ಹುದ್ದೆ ತೊರೆಯುವಾಗ​ ಕೊಹ್ಲಿಗೆ ಮತ್ತೊಂದು ಟಾರ್ಗೆಟ್ ನೀಡಿದ​ ದ್ರಾವಿಡ್​!​

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts