ChatGPT AI Photo Trend : ಇತ್ತೀಚಿನ ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಎಕ್ಸ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಯನ್ನು ಓಪನ್ ಮಾಡಿದರೆ ಸಾಕು, ಎಲ್ಲೆಲ್ಲೂ 80ರ ದಶಕದ ಹಳೆಯ ಚಲನಚಿತ್ರಗಳು ಅಥವಾ ಮ್ಯಾಗ್ಜಿನ್ ಶೈಲಿಯನ್ನು ನೆನಪಿಸುವ ರೆಟ್ರೋ ಚಿತ್ರಗಳದ್ದೇ ಹವಾ. ಚಾಟ್‌ಜಿಪಿಟಿ ಸೇರಿದಂತೆ ವಿವಿಧ AI ಟೂಲ್‌ಗಳನ್ನು ಬಳಸಿ ಕೇವಲ ಒಂದೇ ಒಂದು ಕ್ಲಿಕ್‌ನಲ್ಲಿ ತಮ್ಮ ಫೋಟೋವನ್ನು ಇಂತಹ ವಿಂಟೇಜ್ ಲುಕ್‌ಗೆ ಬದಲಾಯಿಸಿಕೊಳ್ಳುವುದರಲ್ಲಿ ಕೋಟ್ಯಂತರ ಯುವಜನರು ಮಗ್ನರಾಗಿದ್ದಾರೆ ಎಂದರೆ ತಪ್ಪಾಗಲ್ಲ. ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಫೋಟೋವನ್ನು ಅಪ್ಲೋಡ್ ಮಾಡಿ 1980ರಲ್ಲಿ ನಾವಿದಿದ್ದರೆ ಹೇಗೆ ಕಾಣುತ್ತಿದ್ದೆವು ಎಂದು ಕುತೂಹಲದಿಂದ ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ, ತಮ್ಮ ಇನ್ಸ್ಟಾ ಸ್ಟೋರಿ, ವಾಟ್ಸ್ಆ್ಯಪ್ ಸ್ಟೇಟಸ್ ಹಾಗೂ ಫೇಸ್ಬುಕ್ ಸ್ಟೋರಿಗಳಲ್ಲಿ ಅಪ್ಲೋಡ್ ಮಾಡಿ ಖುಷಿ ಪಡುತ್ತಿದ್ದಾರೆ. ಆದರೆ, ಅದರ ಹಿಂದಿರುವ ಕರಾಳ ಸತ್ಯವೊಂದು ಯಾರಿಗೂ ಕಾಣುತ್ತಿಲ್ಲ.