AI Misuse Alert : ಕೃತಕ ಬುದ್ದಿಮತ್ತೆ ಈಗ ಕೇವಲ ಬರವಣಿಗೆ, ಸಂಶೋಧನೆ, ತಾಂತ್ರಿಕ ಕೆಲಸಗಳಿಗೆ ಮಾತ್ರ ಸೀಮಿತವಾಗಿಲ್ಲ, ಶಸ್ತಾಸ್ತ್ರ ಅಭಿವೃದ್ದಿಗೂ ಎಐ ಬಳಕೆಯಾಗುತ್ತಿರುವ ಆತಂಕಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಆಂಥ್ರೊಪಿಕ್ (Anthropic) ಸಂಸ್ಥೆಯ ಪ್ರಕಾರ, ಕ್ಲಾಡ್ ಎಐ ಜನರೇಷನ್ ಬಳಸಿಕೊಂಡು ಕ್ಷಿಪಣಿ ಮಾರ್ಗದರ್ಶಿತ ರಾಕೆಟ್ ಹಾಗೂ ಮಿಲಿಟರಿ ಡ್ರೋನ್ಗಳಿಗೆ ಸಂಬಂಧಿಸಿದ ಸಾಫ್ಟ್ವೇರ್ ಅಭಿವೃದ್ಧಿಪಡಿಸಲು ಹಲವು ಪ್ರಯತ್ನಗಳು ನಡೆದಿವೆ.