ಗುರುಗ್ರಾಮ್ ಹಿಟ್ ಅಂಡ್ ರನ್ ಪ್ರಕರಣ; ರಾಜಸ್ಥಾನದಲ್ಲಿ ಆರೋಪಿ ಕಲ್ಯಾಣ್ ಬೈನ್ಸ್ಲಾ ಬಂಧಿಸಿದ ಪೊಲೀಸರು: ಕೊಲೆ ಯತ್ನ ಪ್ರಕರಣ ದಾಖಲು | Gurugram
ಆರೋಪಿ ಕಲ್ಯಾಣ್ ಬೈನ್ಸ್ಲಾ
Published on:
Copied
Follow Us
ನವದೆಹಲಿ: ಹರಿಯಾಣದ ಗುರುಗ್ರಾಮ್ನ(Gurugram) ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿದ್ದ ಬೆಚ್ಚಿಬೀಳಿಸುವ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳವಾರ(ಸೆ. 15) ರಾಜಸ್ಥಾನದಲ್ಲಿ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ರಾಜಸ್ಥಾನದ ದೌಸಾದಲ್ಲಿ ಕಲ್ಯಾಣ್ನನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ಮತ್ತು ಕಾನೂನು ಕ್ರಮಗಳಿಗಾಗಿ ಶೀಘ್ರದಲ್ಲೇ ಗುರುಗ್ರಾಮ್ಗೆ ಕರೆತರುವ ನಿರೀಕ್ಷೆಯಿದೆ. ಮತ್ತು ಹಿಟ್ ಅಂಡ್ ರನ್ ಪ್ರಕರಣದಲ್ಲಿ ಗಾಯಾಳು ಸಿಯಾ ಮತ್ತು ಕುಟುಂಬಸ್ಥರ ದೂರಿನ ಆಧಾರದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.
ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಹೊಡೆಯುವುದನ್ನು ತೋರಿಸುವ ವೀಡಿಯೊ ಸೋಮವಾರ ವೈರಲ್ ಆಗಿತ್ತು. ಸಿಯಾ ತನ್ನ ಅಪ್ರಿಲಿಯಾ ಆರ್ಎಸ್ 457 (Aprilia RS 457) ಸ್ಪೋರ್ಟ್ಸ್ ಬೈಕ್ನಲ್ಲಿ ಇತರ ಸವಾರರೊಂದಿಗೆ ತೆರಳುತ್ತಿದ್ದಾಗ ಬಿಳಿ ಬಣ್ಣದ ಸೆಡಾನ್ ಕಾರು ಆಕೆಯನ್ನು ಹಿಂಬಾಲಿಸಿದೆ. ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾ ಹಿಟ್ ಅಂಡ್ ರನ್ ಮಾಡಿದ್ದಾನೆ. ಆತ ಡಿಕ್ಕಿ ಹೊಡೆದರಭಸಕ್ಕೆ ಸಿಯಾ ಬೈಕ್ನಿಂದ ರಸ್ತೆಗೆ ಉರುಳಿರುವುದು ಹೆಲ್ಮೆಟ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋ ಹಂಚಿಕೊಂಡಿದ್ದ ಮಹಿಳಾ ಬೈಕರ್ ಸಿಯಾ ಗುರುಗ್ರಾಮ್ ಈಗ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ನನಗೆನಿಸುವುದಿಲ್ಲ. ಈ ಕ್ಲಿಪ್ನಲ್ಲಿ ನೀವು ನೋಡುವಂತೆ ಆ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿದ್ದರು. ಹರಿಯಾಣ ಪೊಲೀಸರು ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋ ಆಧಾರದ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ರಾಜಸ್ಥಾನದ ದೌಸಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ (ಏಜೆನ್ಸೀಸ್).