ಮಂಗಳವಾರ (ಸೆ.01) ಬೆಳಗ್ಗೆ 9:16ಕ್ಕೆ ಗೋವಾದಿಂದ ಹೊರಟಿದ್ದ '6E 2102' ಇಂಡಿಗೋ ವಿಮಾನವು ದಕ್ಷಿಣ ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಸುಮಾರು 14,000 ಅಡಿ ಎತ್ತರದಲ್ಲಿದ್ದಾಗ, ವಿಮಾನದ ಒಂದು ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದನ್ನು ಸೂಕ್ಷ್ಮವಾಗಿ ಅರಿತ ಪೈಲಟ್, ಹೆಚ್ಚು ಸಮಯ ವ್ಯರ್ಥ ಮಾಡದೆ, ವಿಮಾನವನ್ನು ವಾಪಸ್ ಗೋವಾ ಏರ್ಪೋರ್ಟ್ ಕಡೆ ತಿರುಗಿಸಿ, ತುರ್ತು ಭೂಸ್ಪರ್ಶ ಮಾಡಿದ್ದಾರೆ.