ಹೌದು, ಪಿಯರ್ಸ್ ಗನ್ಗಳಿಂದ ಮೂಗು ಚುಚ್ಚಿಸಿಕೊಳ್ಳುವುದು ತುಂಬಾನೇ ಸುಲಭ. ವೇಗವಾಗಿ ಮತ್ತು ಭಯವಿಲ್ಲದೆ ಮೂಗು ಮತ್ತು ಕಿವಿಯನ್ನು ಚುಚ್ಚಿಸಿಕೊಳ್ಳಬಹುದು. ಆದರೆ, ಚುಚ್ಚಿಸಿಕೊಳ್ಳುವಾಗ ನಾವು ಮಾಡುವ ಸಣ್ಣ ಎಡವಟ್ಟುಗಳು ಪ್ರಾಣಕ್ಕೆ ಕುತ್ತು ತರಬಹುದು ಎನ್ನುತ್ತಾರೆ ವೃತ್ತಿಪರ ಪಿಯರ್ಸರ್ಗಳು ಮತ್ತು ಆರೋಗ್ಯ ತಜ್ಞರು. ಏಕೆಂದರೆ, ಪಿಯರ್ಸ್ ಗನ್ಗಳನ್ನು ಮರುಬಳಕೆ ಮಾಡುವಾಗ ಅವುಗಳನ್ನು ಆಟೋಕ್ಲೇವ್ನಲ್ಲಿ ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಿರುವುದರಿಂದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಅಥವಾ ಎಚ್ಐವಿಯಂತಹ ಸೋಂಕುಗಳು ಹರಡುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಗನ್ ಬಳಸಿ ಚುಚ್ಚುವುದರಿಂದ ಅಂಗಾಂಶಕ್ಕೆ ಹೆಚ್ಚಿನ ಹಾನಿಯಾಗಬಹುದು. ಇದರಿಂದ ಗಾಯ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ಸೋಂಕಿನ ಅಪಾಯವೂ ಹೆಚ್ಚಾಗಬಹುದು.