More

    ಬೆಳ್ತಂಗಡಿಯಲ್ಲಿ 15 ಮಂದಿ ವಿರುದ್ಧ ಕೇಸ್: ನಿಯಮಬಾಹಿರವಾಗಿ ಪ್ರತಿಭಟನೆ ನಡೆಸಿದ ಆರೋಪ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಉಜಿರೆಯಲ್ಲಿ ಭಾರಿ ಗಾತ್ರದ ಮರ ಬಿದ್ದು ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ, ನಿಲ್ಲಿಸಿದ್ದ ಕಾರು ಮತ್ತು ಓಮ್ನಿ ವಾಹನ ನುಜ್ಜುಗುಜ್ಜಾದ ಘಟನೆ ಬಗ್ಗೆ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಉದ್ಯಮಿ ಪ್ರವೀಣ್ ಫರ್ನಾಂಡಿಸ್ ಸಹಿತ 15 ಮಂದಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಸ್ಥಳದಲ್ಲಿ ಸೇರಿದ್ದವರು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಜನರನ್ನು ಗುಂಪು ಸೇರಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಪ್ರವೀಣ್ ಫರ್ನಾಂಡಿಸ್, ರಮೇಶ ಗಾಂಧಿನಗರ, ಶೀನ ಗಾಂಧಿನಗರ, ಇಕ್ಷಾಲ್ ಅತ್ತಾಜೆ, ಸಂತೋಷ್ ಉಜಿರೆ ಉಮೇಶ ಆಚಾರ್ಯ, ಅಣ್ಣು ಗಾಂಧಿನಗರ, ಸುಜನ್ ಪಜಿರಡ್ಕ ಬಾಬು ಗಾಂಧಿನಗರ, ಗಿರೀಶ ಪೆರ್ಲ, ಗೋಪಾಲ ಗಾಂಧಿನಗರ, ಗಣೇಶ ಬಡೆಕೊಟ್ಟು, ಉಮರ್ ಟಿ.ಬಿ ಕ್ರಾಸ್, ರಂಜನ್ ಗಾಂಧಿನಗರ ಸಹಿತ ಇತರರ ವಿರುದ್ಧ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ರಾಮಚಂದ್ರ ಪ್ರಕರಣ ದಾಖಲಿದ್ದಾರೆ.

    ಘಟನೆಯ ಹಿನ್ನೆಲೆ

    ಜೂ.24ರಂದು ಉಜಿರೆ ಪೇಟೆಯಲ್ಲಿ ಭಾರಿ ಗಾತ್ರದ ಮರ ರಸ್ತೆ ಮೇಲೆ ಉರುಳಿ ಬಿದ್ದು ವಾಹನಗಳು ನುಜ್ಜುಗುಜ್ಜಾಗಿದ್ದು, ಹಲವರು ಗಾಯಗೊಂಡಿದ್ದರು. ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದವರ ಬೇಜವಾಬ್ದಾರಿ ಕಾರಣದಿಂದ ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು.

    ಸ್ಥಳೀಯರು, ಆಟೋ ಚಾಲಕರು ಗಾಯಾಳುಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸ್ಥಳದಲ್ಲಿಯೇ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ಅಕ್ರಮವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿ 15 ಮಂದಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts