ಪೆಟ್ರೋಲ್-ಡೀಸೆಲ್ ಬೇಡ, ಎಥೆನಾಲ್​ನಿಂದಲೇ ಓಡಲಿದೆ ಕಾರು: ಫ್ಲೆಕ್ಸ್-ಇಂಧನ ಎಂಜಿನ್, ಪರ್ಯಾಯ ಶಕ್ತಿ ಬಳಕೆ; ಇವಿ ಮೋಡ್​ನಲ್ಲೂ ಸಂಚಾರ

ನವದೆಹಲಿ: ಸಂಪೂರ್ಣವಾಗಿ ಎಥೆನಾಲ್ ಇಂಧನದಿಂದ ಚಲಿಸಬಲ್ಲ ವಿಶ್ವದ ಮೊದಲ ಕಾರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಟೊಯೊಟಾ ಮೋಟಾರ್ ಸಂಸ್ಥೆ ‘ಇನ್ನೋವಾ ಹೈಕ್ರಾಸ್’ ಮಾಡೆಲ್​ನ ಕಾರನ್ನು ನಿರ್ವಿುಸಿದೆ. ಫ್ಲೆಕ್ಸಿ-ಇಂಧನ ಎಂಜಿನ್​ನೊಂದಿಗೆ ಕಾರನ್ನು ನಿರ್ಮಾಣ ಮಾಡಲಾಗಿದೆ. ಈ ಕಾರು ಪರ್ಯಾಯ ಇಂಧನಗಳನ್ನು ಬಳಸುವುದರ ಜತೆಗೆ ವಿದ್ಯುತ್ ಶಕ್ತಿಯನ್ನೂ ಉತ್ಪಾದಿಸುತ್ತದೆ. ಇವಿ ಮೋಡ್​ನಲ್ಲೂ ಚಲಿಸುತ್ತದೆ. ಇದು ಭಾರತ್ ಸ್ಟೇಜ್-6 ಮಾನದಂಡಕ್ಕೆ ಅನು ಗುಣವಾಗಿದೆ ಎಂದು ಕಂಪನಿ ತಿಳಿಸಿದೆ. ವಿಶೇಷತೆ ಏನು?: ಕಾರು ಸಂಪೂರ್ಣವಾಗಿ ಎಥೆನಾಲ್​ನಿಂದ ಚಲಿಸುತ್ತದೆ. … Continue reading ಪೆಟ್ರೋಲ್-ಡೀಸೆಲ್ ಬೇಡ, ಎಥೆನಾಲ್​ನಿಂದಲೇ ಓಡಲಿದೆ ಕಾರು: ಫ್ಲೆಕ್ಸ್-ಇಂಧನ ಎಂಜಿನ್, ಪರ್ಯಾಯ ಶಕ್ತಿ ಬಳಕೆ; ಇವಿ ಮೋಡ್​ನಲ್ಲೂ ಸಂಚಾರ