More

    ಕ್ಯಾಪ್ಟನ್ ಆಟ ಮುಂದುವರಿಸಿದ ‘ಹಿಟ್​ಮ್ಯಾನ್​’; ಆಕರ್ಷಕ ಅರ್ಧಶತಕಕ್ಕೆ ಫ್ಯಾನ್ಸ್ ಸಲಾಂ

    ಗುಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್​, ಬ್ಯಾಟ್ ಮಾಡುವಂತೆ ಭಾರತಕ್ಕೆ ಆಹ್ವಾನಿಸಿತು. ಮೊದಲು ಬ್ಯಾಟ್​ಗೆ ಬಂದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪೈಕಿ ವಿರಾಟ್​ ಕೇವಲ 9 ರನ್​ಗೆ ಪೆವಿಲಿಯನ್​ನತ್ತ ಮುಖಮಾಡಿದರು. ‘ರನ್ ಮಷಿನ್’ ಬೆನ್ನಲ್ಲೇ ರಿಷಭ್ ಪಂತ್ ಕೂಡ ಔಟ್ ಆಗಿ ಹೊರನಡೆದರು.

    ಇದನ್ನೂ ಓದಿ: ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರಯತ್ನ

    ಈ ವೇಳೆ ಇಂಗ್ಲೆಂಡ್​ ಬೌಲರ್​ಗಳಿಗೆ ತಕ್ಕ ಪಾಠ ಕಲಿಸಲೆಂದು ಕ್ರೀಸ್​ಗೆ ಅಂಟಿದ ರೋಹಿತ್ ಶರ್ಮಗೆ, ಭಾರತದ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​​ಮನ್ ಸೂರ್ಯಕುಮಾರ್ ಯಾದವ್ ಸಾಥ್ ನೀಡಿದರು. ಎರಡು ಸಿಕ್ಸರ್​ ಮತ್ತು ನಾಲ್ಕು ಬೌಂಡರಿಗಳನ್ನು ಸಿಡಿಸಿದ ರೋಹಿತ್, 39 ಎಸೆತಗಳಲ್ಲಿ 57 ರನ್​ಗಳನ್ನು ಕಲೆಹಾಕುವ ಮೂಲಕ ಆಕರ್ಷಕ ಅರ್ಧಶತಕ ಗಳಿಸಿದರು. ಇದು ಟೀಮ್ ಇಂಡಿಯಾ ಸ್ಕೋರ್​ ಕಾರ್ಡ್​ಗೆ ಮತ್ತಷ್ಟು ಬಲ ತುಂಬಿತು.

    ಇನ್ನೇನು ರೋಹಿತ್​ರಿಂದ ಸ್ಫೋಟಕ ಬ್ಯಾಟಿಂಗ್ ಆರಂಭಗೊಳ್ಳುತ್ತಿದೆ ಎನ್ನುವಷ್ಟರೊಳಗೆ ಅವರ ವಿಕೆಟ್ ಪತನಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಆಘಾತ ಉಂಟುಮಾಡಿತು. ಅಂತಿಮವಾಗಿ ಅರ್ಧಶತಕ ಕೊಡುಗೆ ಕೊಟ್ಟ ರೋಹಿತ್​ಗೆ ಫ್ಯಾನ್ಸ್ ಸಲಾಂ ಎಂದಿದ್ದಾರೆ,(ಏಜೆನ್ಸೀಸ್).

    ಟಿ20 ವಿಶ್ವಕಪ್ 2024: ಮತ್ತೊಮ್ಮೆ ಎಡವಿದ ‘ಕಿಂಗ್’ ಕೊಹ್ಲಿ! ದಾಖಲೆಗಳ ಸರದಾರನಿಗೆ ತಪ್ಪದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts