More

    ವಿಕಸಿತ ಭಾರತಕ್ಕಾಗಿ ಓಟ 30ರಂದು

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿಕಸಿತ ಭಾರತಕ್ಕಾಗಿ ಲೆಕ್ಕ ಪರಿಶೋಧಕರ ಓಟವನ್ನು ಜೂನ್ 30ರಂದು ಆಯೋಜಿಸಲಾಗಿದೆ ಎಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ ಮುನ್ನೊಳ್ಳಿ ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6ಗಂಟೆಗೆ ಓಟವು ಕೇಶ್ವಾಪುರ ಐಸಿಎಐ ಭವನದಿಂದ ಆರಂಭಗೊಂಡು ಬಸವೇಶ್ವರ ವೃತ್ತ (ಸವೋದಯ ವೃತ್ತ) ದವರೆಗೆ ಸಾಗಿ, ಮರಳಿ ಐಸಿಎಐ ಭವನದಲ್ಲಿ ಕೊನೆಗೊಳ್ಳಲಿದೆ. 300 ಲೆಕ್ಕಪರಿಶೋಧಕರು ಹಾಗೂ ಸಿಎ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದರು.

    ಶಾಸಕ ಮಹೇಶ ಟೆಂಗಿನಕಾಯಿ ಓಟಕ್ಕೆ ಚಾಲನೆ ನೀಡುವರು. ಪಾಲಿಕೆ ಸದಸ್ಯೆ ಉಮಾ ಮುಕುಂದ ಪಾಲ್ಗೊಳ್ಳುವರು. ಇದೇ ವರ್ಷ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು 75 ವರ್ಷಗಳನ್ನು ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಲು ಅಂದು ದೇಶಾದ್ಯಂತ ಇರುವ ನಮ್ಮ ಶಾಖೆಗಳಲ್ಲಿ ಓಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಓಟದ ಕೋ-ಆರ್ಡಿನೇಟರ್ ಸಿ.ಆರ್. ಢವಳಗಿ ಮಾತನಾಡಿ, ದೇಶದಲ್ಲಿ 3 ಲಕ್ಷ ಲೆಕ್ಕ ಪರಿಶೋಧಕರಿದ್ದಾರೆ. 2047ರ ವೇಳೆಗೆ ಸುಮಾರು 30 ಲಕ್ಷ ಲೆಕ್ಕ ಪರಿಶೋಧಕರ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯುವಕರು ಸಿಎ ಕೋರ್ಸ್​ಗೆ ಆಕರ್ಷಿತರಾಗಬೇಕು. ದೇಶದ ಅರ್ಥ ವ್ಯವಸ್ಥೆಯಲ್ಲಿ ಲೆಕ್ಕಪರಿಶೋಧಕರು ಪ್ರಮುಖ ಪಾತ್ರ ನಿರ್ವಹಿಸಬಲ್ಲರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts