More

    ವಿನೂತನ ಮದುವೆ: ಆನ್​ಲೈನ್​​ನಲ್ಲೆ​ ವಿವಾಹವಾದ ಜೋಡಿ, ಕುಟುಂಬಸ್ಥರಿಂದ ಶುಭ ಹಾರೈಕೆ

    ಶಿಮ್ಲಾ: ವಧು-ವರರ ಜೋಡಿಯೊಂದು ಆನ್​​ಲೈನ್​​ನಲ್ಲೇ ವಿನೂತನವಾಗಿ ವಿವಾಹವಾಗಿರುವ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ನಡೆದಿದೆ.

    ಇದನ್ನೂ ಓದಿ: ಸೀತಾಮಾತೆ, ಶ್ರೀರಾಮನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್​​ ಸಚಿವ

    ಆಶಿಶ್​ ಸಿಂಘಾ ಮತ್ತು ಶಿವಾನಿ ಠಾಕೂರ್​​ ಎಂಬುವರೇ ಆನ್​ಲೈನ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿಯಾಗಿದ್ದು, ಇದಕ್ಕೆ ಕುಟುಂಬಸ್ಥರು ಕೂಡ ಸಾಥ್​​ ನೀಡಿದ್ದಾರೆ. ಆಶಿಶ್​​ ಶಿಮ್ಲಾದ ಕೋಟ್‌ಗಢದಿಂದ ತನ್ನ ಭಾವಿ ಪತ್ನಿ ಜತೆ ಮದುವೆಗಾಗಿ ಕುಲುವಿನ ಭುಂಟರ್​​ಗೆ ತೆರಳಬೇಕಿತ್ತು.

    ಆದರೆ ಮಳೆಯ ಆರ್ಭಟ, ಪ್ರವಾಹ, ರಸ್ತೆ ಸಂಪರ್ಕ ಕಡಿತದಿಂದಾಗಿ ಈ ಮದುವೆಯನ್ನು ಮುಂದೂಡ ಬೇಕಾಗಿರುವ ಅನಿವಾರ್ಯತೆ ಎದುರಾಗಿತ್ತು. ಪ್ರತಿಕೂಲ ಹವಾಮಾನದಿಂದ ವಿಚಲಿತರಾಗದೆ, ಆಶಿಶ್ ಮತ್ತು ಶಿವಾನಿ ತಮ್ಮ ವಿವಾಹವನ್ನು ವಾಸ್ತವಿಕವಾಗಿ ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ವೇಳೆ ವಧು-ವರರು ಉಪಾಯವೊಂದನ್ನು ಮಾಡಿ ಆನ್​ಲೈನ್​ ಮೂಲಕ ಮದುವೆಯಾಗುವ ಇಚ್ಛೆಯನ್ನು ಇಂಗಿತ ವ್ಯಕ್ತಪಡಿಸಿದ್ಧಾರೆ.

    ಇವರಿಬ್ಬರ ಈ ನಿರ್ಧಾರಕ್ಕೆ ಎರಡು ಕುಟುಂಬದವರು ಸಹಮತವನ್ನು ವ್ಯಕ್ತಪಡಿಸಿದ್ದು, ನಿಗದಿಯಂತೆ ಸೋಮವಾರ ದಿನ ವಿಡಿಯೋ ಕಾನ್ಫರೆನ್ಸ್​​ ಮೂಲಕ ಮದುವೆಯಾಗಿದ್ದಾರೆ. ಈ ಮದುವೆಗೆ ವರನ ಹಾಗೂ ವಧುವಿನ ಕೆಲವು ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾಗಿದ್ದು, ಜೋಡಿಗೆ ಆನ್​ಲೈನ್​ನಲ್ಲೇ ಶುಭ ಹಾರೈಸಿದ್ದಾರೆ. ಇದನ್ನು ಸಿಪಿಐ(ಎಂ) ಮಾಜಿ ಶಾಸಕ ರಾಕೇಶ್ ಸಿಂಘಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದೇನೇ ಇದ್ದರೂ, ಇಂತಹ ಸಂದರ್ಭಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅನುಕೂಲತೆ ಮತ್ತು ಪ್ರವೇಶವನ್ನು ಈ ಮದುವೆ ಮತ್ತಷ್ಟು ಎತ್ತಿ ತೋರಿಸಿದೆ(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts