More

    ವೈದ್ಯನ ಎಡವಟ್ಟು..ಬಾಲಕನ ಗಾಯಗೊಂಡ ಜಾಗಕ್ಕೆ ಬದಲಾಗಿ ಕೈಗೆ ಶಸ್ತ್ರಚಿಕಿತ್ಸೆ!

    ಮುಂಬೈ: ಕಾಲಿಗೆ ಪೆಟ್ಟಾಗಿದ್ದ ಒಂಬತ್ತು ವರ್ಷದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯ ಗಾಯಗೊಂಡ ಜಾಗಕ್ಕೆ ಬದಲಾಗಿ ಬಾಲಕನ ಕೈಕಾಲುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾನೆ. ದೇವರ ಸಮಾನನಾದ ವೈದ್ಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವರೇ ರೋಹಿತ್ ಶರ್ಮಾ?

    ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ. ಬಾಲಕನ ಪಾಲಕರು ಇದೀಗ ಪೊಲೀಸರಿಗೆ ದೂರು ನೀಡಿದ್ದು, ಪೂರ್ಣ ಪ್ರಮಾಣದ ತನಿಖೆ ನಡೆಸಲಾಗುವುದು ಎಂದು ಅಲ್ಲಿನ ಜಿಲ್ಲಾ ಆರೋಗ್ಯ ಅಧಿಕಾರಿ ಭರವಸೆ ನೀಡಿದ್ದಾರೆ.

    ಮತ್ತೊಂದೆಡೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಾಲಕನ ಪೋಷಕರು ನೀಡಿದ ವಿವರಗಳ ಪ್ರಕಾರ, ಕಳೆದ ತಿಂಗಳು ಬಾಲಕ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಕಾಲಿಗೆ ಗಾಯಮಾಡಿಕೊಂಡಿದ್ದ. ನೋವು ಕಡಿಮೆಯಾಗದ ಕಾರಣ ಜೂ.15ರಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಶಸ್ತ್ರ ಚಿಕಿತ್ಸೆ ಅಗತ್ಯ ಎಂದಿದ್ದ ವೈದ್ಯರು ಇತ್ತೀಚೆಗೆ ಬಾಲಕನ ಕಾಲಿಗೆ ಬದಲಾಗಿ ಕೈಕಾಲುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದನ್ನು ಗಮನಿಸಿದ ಪಾಲಕರು ಕೂಡಲೇ ವೈದ್ಯರ ಗಮನಕ್ಕೆ ತಂದಿದ್ದಾರೆ. ಆಗ ಎಚ್ಚೆತ್ತುಕೊಂಡ ವೈದ್ಯ ಕಾಲಿಗೆ ಸಹ ಆಪರೇಷನ್ ಮಾಡಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಪೊಲೀಸರು ತನಿಖೆ ಆರಂಭಿಸಿರಲಿಲ್ಲ. ಆದರೆ ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದಿಂದ ತನಿಖೆ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.

    ಘಟನೆ ಬಗ್ಗೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ.ಕೈಲಾಸ್ ಪವಾರ್ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ . ಬಾಲಕನ ಕಾಲಿಗೆ ಗಾಯವಾಗಿದ್ದು, ಮೆದುಳಿಗೆ ತೊಂದರೆಯಾಗಿದೆ. ಹೀಗಾಗಿ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಗಜೇಂದ್ರ ಪವಾರ್ ಮಾಧ್ಯಮಗಳಿಗೆ ವಿವರಿಸಿದರು.

    ಈ ಹುಡುಗನ ಬಗ್ಗೆ ಪಾಲಕರಿಗೆ ಮೊದಲೇ ತಿಳಿಸುವಂತೆ ವೈದ್ಯರಿಗೆ ಹೇಳಿದ್ದರೂ ಅವರು ಹೇಳಲು ಮರೆತಿರಬಹುದು ಅಥವಾ ಸಂತ್ರಸ್ತನ ಸಂಬಂಧಿಕರಲ್ಲಿ ಯಾರಿಗಾದರೂ ಹೇಳಿರಬಹುದು. ಎರಡು ಶಸ್ತ್ರಚಿಕಿತ್ಸೆ ನಡೆಸಿರುವುದರಲ್ಲಿ ವೈದ್ಯರ ತಪ್ಪೇನೂ ಇಲ್ಲ. ಆದರೆ, ಪಾಲಕರಿಗೆ ಅರ್ಥವಾಗುವ ರೀತಿಯಲ್ಲಿ ವಿಷಯ ತಿಳಿಸದ ಕಾರಣ ಸಮಸ್ಯೆ ಉಂಟಾಗಿದೆ. ಅದೇ ದಿನ ಬಾಲಕನ ವಯಸ್ಸಿನ ಸುಮಾರು ಇಬ್ಬರಿಗೆ ಇದೇ ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಗಜೇಂದ್ರ ವಿವರಿಸಿದರು.

    ಮೊಬೈಲ್ ಸಂಖ್ಯೆ ಪೋರ್ಟಿಂಗ್​ಗೆ ಹೊಸ ನಿಯಮ..ಜುಲೈ 1 ರಿಂದ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts