More

    ಮೋದಿ 3.0 ಸರ್ಕಾರದಲ್ಲಿ ಜೆ.ಪಿ ನಡ್ಡಾ ಹೆಗಲಿಗೆ ಮತ್ತೊಂದು ದೊಡ್ಡ ಜವಾಬ್ದಾರಿ! ಏನದು ಗೊತ್ತಾ?

    ನವದೆಹಲಿ: ಜೆ.ಪಿ.ನಡ್ಡಾ ಅವರು ಮೋದಿ ಸರ್ಕಾರ 3.0 ರಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸರ್ಕಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡ ಅವರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವನ್ನು ಸಹ ನಿಯೋಜಿಸಲಾಯಿತು. ಅದರ ಜತೆಗೆ ಇದೀಗ ಬಿಜೆಪಿ ರಾಜ್ಯಸಭೆಯಲ್ಲೂ ದೊಡ್ಡ ಜವಾಬ್ದಾರಿ ನೀಡಿದೆ.

    ಇದನ್ನು ಓದಿ: ಆರೋಗ್ಯದಲ್ಲಿ ಏರುಪೇರಾದರು ಸತ್ಯಾಗ್ರಹ ಮುಂದುವರಿಸುವೆ ಎಂದಿದ್ದೇಕೆ ಸಚಿವೆ ಅತಿಶಿ

    ಜೆ.ಪಿ.ನಡ್ಡಾ ಅವರು ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ರಾಜ್ಯಸಭೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸ್ಥಾನಕ್ಕೆ ಜೆ.ಪಿ.ನಡ್ಡಾ ಬರಲಿದ್ದಾರೆ. ಅಲ್ಲದೆ ಪಕ್ಷದ ಅಧ್ಯಕ್ಷರಾಗಿರುವ ಅವರ ಅಧಿಕಾರಾವಧಿ ಜೂನ್ 30ರಂದು ಕೊನೆಗೊಳ್ಳಲಿದೆ. ಹೀಗಿರುವಾಗ ಅವರ ಜಾಗಕ್ಕೆ ಬಿಜೆಪಿ ಸಂಘಟನೆಯ ಜವಾಬ್ದಾರಿ ಹೊಸ ಮುಖಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ.

    ಮೋದಿ ಸಂಪುಟದಲ್ಲಿ ಜೆ.ಪಿ.ನಡ್ಡಾ ಸ್ಥಾನ ಪಡೆದ ನಂತರವೇ ಇದು ಸ್ಪಷ್ಟವಾಯಿತು. ಇದೀಗ ಬಿಜೆಪಿ ಅವರಿಗೆ ರಾಜ್ಯಸಭೆಯಲ್ಲಿ ಸಭಾನಾಯಕನ ಮಹತ್ವದ ಜವಾಬ್ದಾರಿ ನೀಡಿದೆ. ಇಲ್ಲಿಯವರೆಗೆ ಪಿಯೂಷ್ ಗೋಯಲ್ ರಾಜ್ಯಸಭೆಯ ನಾಯಕರಾಗಿದ್ದರು, ಆದರೆ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗ ಈ ಜವಾಬ್ದಾರಿಯನ್ನು ನಡ್ಡಾ ಅವರು ವಹಿಸಿಕೊಳ್ಳಲಿದ್ದಾರೆ.

    18ನೇ ಲೋಕಸಭೆಗೆ ಸಂಸದರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಮುಂದುವರಿದಿದೆ. ಲೋಕಸಭೆಯ ಕಲಾಪ ಸೋಮವಾರ (ಜೂನ್​​ 24) ಆರಂಭವಾದಾಗ ಹಂಗಾಮಿ ಸ್ಪೀಕರ್ ಭರ್ತಿಹರಿ ಮಹತಾಬ್ ಅವರು 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಬೋಧಿಸಿದರು. ಸದನದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. (ಏಜೆನ್ಸೀಸ್​)

    ದೆಹಲಿ ಹೈಕೋರ್ಟ್​​ ಆದೇಶದ ವಿರುದ್ಧ ಸಿಎಂ ಕೇಜ್ರಿವಾಲ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts