More

    826 ಕೋಟಿ ರೂಪಾಯಿ ಮೌಲ್ಯದ 350 ಕಾಮಗಾರಿಗಳನ್ನು ರದ್ದುಗೊಳಿಸಿದ ಸರ್ಕಾರ

    ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನೇತೃತ್ವದ ಹಿಂದಿನ ಮಹಾಮೈತ್ರಿಕೂಟ ಸರ್ಕಾರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ನೀಡಲಾಗಿದ್ದ 826 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿಯನ್ನು ಬಿಹಾರದ ಎನ್​ಡಿಎ ಸರ್ಕಾರ ರದ್ದುಗೊಳಿಸಿದೆ.

    ಇದನ್ನು ಓದಿ: ಸ್ಪೀಕರ್​ ಸ್ಥಾನಕ್ಕಾಗಿ ಚುನಾವಣೆ; ಎನ್​ಡಿಎ ಅಭ್ಯರ್ಥಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

    ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವುದು ಪಬ್ಲಿಕ್​ ಹೆಲ್ತ್​ ಇಂಜಿನಿಯರಿಂಗ್​ ಇಲಾಖೆ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಹಾರ ಪಿಎಚ್‌ಇಡಿ ಸಚಿವ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಹಿಂದಿನ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ಇಲಾಖೆಯಿಂದ ಹಲವಾರು ಗುತ್ತಿಗೆಗಳನ್ನು ನೀಡಲಾಗಿತ್ತು. 826 ಕೋಟಿ ಮೌಲ್ಯದ 350 ಗುತ್ತಿಗೆ ನೀಡಿರುವುದಲ್ಲಿ ಸೂಕ್ತ ಕ್ರಮ ಅನುಸರಿಸಿಲ್ಲ ಎಂಬುದು ಇಲಾಖೆ ನಡೆಸಿದ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದರು.

    ಈ ಗುತ್ತಿಗೆ ಒಪ್ಪಂದಗಳು ಗ್ರಾಮೀಣ ನೀರು ಸರಬರಾಜಿಗೆ ಸಂಬಂಧಿಸಿವೆ. ಪ್ರಾಥಮಿಕ ತನಿಖಾ ವರದಿ ಬಂದ ಬಳಿಕ ಇಲಾಖೆ ಸಚಿವರು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು. ನಂತರ ಈ ಒಪ್ಪಂದಗಳನ್ನು ರದ್ದುಪಡಿಸಲು ಆದೇಶ ಹೊರಡಿಸಲಾಯಿತು. ಪ್ರಾಥಮಿಕ ತನಿಖಾ ವರದಿಯನ್ನು ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಇಲಾಖೆ ಸಲ್ಲಿಸಿದೆ. ಸಮಗ್ರ ತನಿಖೆಯಾಗಲಿ, ಬಳಿಕ ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಹಿಂದಿನ ಸರ್ಕಾರವು 17 ತಿಂಗಳಲ್ಲಿ ಪಿಎಚ್‌ಇ ಇಲಾಖೆಗೆ 4,600 ಕೋಟಿ ರೂಪಾಯಿ ಮೌಲ್ಯದ ಒಟ್ಟು 1,160 ಗುತ್ತಿಗೆಗಳನ್ನು ನೀಡಿದೆ ಎಂದು ಸಿಂಗ್ ಹೇಳಿದರು. ನಾವು ಇದುವರೆಗೆ 350 ಒಪ್ಪಂದಗಳನ್ನು ರದ್ದುಗೊಳಿಸಿದ್ದೇವೆ. ಉಳಿದವುಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​​)‘

    72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ! ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts