More

    ನಟ ದರ್ಶನ್‌ ಗ್ಯಾಂಗ್‌ಗೆ ಬಿಗ್‌ ಶಾಕ್: ನಾಲ್ವರು ಮಾತ್ರ ಬೇರೆ ತುಮಕೂರು ಜೈಲಿಗೆ ಶಿಫ್ಟ್! ಕಾರಣ ಹೀಗಿದೆ…

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಜೈಲು ಸೇರಿದೆ. ಪೊಲೀಸ್ ಕಸ್ಟಡಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಅದೇಶ ನೀಡಿದೆ.

    ಇದನ್ನೂ ಓದಿ: ಸೂರಜ್ ರೇವಣ್ಣ ಜುಲೈ 1 ರ ಸಂಜೆ 4 ಗಂಟೆವರೆಗೆ ಸಿಐಡಿ ಕಸ್ಟಡಿಗೆ ಹಾಜರುಪಡಿಸಲು 

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಒಂದೇ ಕಡೆ ಇರುವುದು ಸುರಕ್ಷಿತವಲ್ಲ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ದಿನವೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂರ್ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ಇಂದು ದರ್ಶನ್ ಗ್ಯಾಂಗ್‌ ಬಗ್ಗೆ ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಒಪ್ಪಿಗೆ ಸೂಚಿಸಿದೆ.

    ಕೊಲೆ ಕೇಸ್‌ನಲ್ಲಿ ಪ್ರಕರಣದಲ್ಲಿ ಕಾರ್ತಿಕ್, ಕೇಶವಮೂರ್ತಿ,ನಿಖಿಲ್ ನಾಯಕ್ ಮತ್ತು ರವಿಶಂಕರ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ಮುಂದೆ ಶರಣಾಗಿದ್ದ ಆರೋಪಿಗಳಾದ ಕಾರ್ತಿಕ್‌, ಕೇಶವ್ & ನಿಖಿಲ್ ಈ ಮೂವರು ಕೊಲೆ ಬಗ್ಗೆ ಪೊಲೀಸರ ಮುಂದೆ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದರು. ಈ ಮೂವರು ನೀಡಿದ ಮಾಹಿತಿಯಿಂದಲೇ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆಗಿತ್ತು.

    ದರ್ಶನ್ ಅಂಡ್ ಗ್ಯಾಂಗ್​ನಿಂದ ಸಹ ಆರೋಪಿಗಳ ಮೇಲೆ ಹಲ್ಲೆ ಸಾಧ್ಯತೆ?: ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆರೋಪಿಗಳ ಜೈಲು ಬದಲಿಸುವುದು ಸೂಕ್ತ ಎಂದು ಪೊಲೀಸರು ಹೇಳಿದ್ದರು. ಎಲ್ಲಾ ಆರೋಪಿಗಳು ಒಂದು ಕಡೆ ಇರುವುದು ಸೂಕ್ತವಲ್ಲ. ಹೀಗಾಗಿ ನಟ ದರ್ಶನ್ ಹಾಗೂ ಇತರ ಕೆಲ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರ ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ಪ್ರಮುಖವಾಗಿ ದರ್ಶನ್ ಗ್ಯಾಂಗ್ ನಿಂದಲೇ ಸಹ ಆರೋಪಿಗಳ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ಕೇಸಿನ‌ ಆರೋಪಿಗಳು ತಮ್ಮ ಗ್ಯಾಂಗ್ ಸದಸ್ಯರ ಮೇಲೆ‌ ಹಲ್ಲೆ ನಡೆಸುವ ಸಾಧ್ಯತೆ ಇದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಬಾಯ್ಬಿಟ್ಟ ಆರೋಪಿಗಳ ಮೇಲೆ ಹಲ್ಲೆಯಾಗುವ ಸಾಧ್ಯತೆ ಇದೆ. ಆರೋಪಿಗಳ ಸುರಕ್ಷತೆ ದೃಷ್ಟಿಯಿಂದ ಯಾರ ಮೇಲೆ, ಯಾರು ಹಲ್ಲೆ ನಡೆಸುತ್ತಾರೆ ಅನ್ನೋ ಮಾಹಿತಿಯನ್ನು ಪೊಲೀಸರು ಗೌಪ್ಯವಾಗಿಟ್ಟಿದ್ದಾರೆ.

    ಜಿಮ್ ಇಲ್ಲ, ಡಯಟ್ ಇಲ್ಲ..10 ತಿಂಗಳಲ್ಲಿ 23 ಕೆಜಿ ತೂಕ ಕಳೆದುಕೊಂಡ ಉದ್ಯಮಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts